ಮೇಲ್ಮನೆ ಚುನಾವಣೆ 3 ಪಕ್ಷ ಬಿರುಸಿನ ಪ್ರಚಾರ

ಗುರುವಾರ, 2 ಡಿಸೆಂಬರ್ 2021 (17:05 IST)
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆ ದಿನೇದಿನೇ ರಂಗೇರತೊಡಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.ಮೇಲ್ಮನೆ ಚುನಾವಣೆ ಎನ್ನುವುದಕ್ಕಿಂತ ಮೇಲ್ಮನಿ ಚುನಾವಣೆ ಎಂಬುದೇ ಲೇಸು ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣಾ ಕಣದಲ್ಲಿ ಇರುವ ಬಹುತೇಕ ಅಭ್ಯರ್ಥಿಗಳೆಲ್ಲ ಕೋಟಿ ಕುಳಗಳು. ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರು. ಹೀಗಾಗಿ ಗ್ರಾಮ ಪಂಚಾಯ್ತಿ ಸದಸ್ಯರ ಮನವೊಲಿಕೆ ಯತ್ನಗಳು ಬಿರುಸುಗೊಂಡಿವೆ.
 
ಗ್ರಾಪಂ ಸದಸ್ಯರು ಆಯ್ಕೆ ಸಂಬರ್ಭದಲ್ಲಿ ನಾವು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೆಂದು ಹೇಳಿಕೊಂಡಿದ್ದರು. ಆದರೆ ಈಗ ಬಹುತೇಕ ಸದಸ್ಯರುಗಳು ನಾವು ಯಾವುದೇ ಪಕ್ಷದವರಲ್ಲ. ನಾವು ಯಾವುದೇ ಪಕ್ಷದ ಚಿಹ್ನೆಯಡಿ ಆಯ್ಕೆಯಾದವರಲ್ಲ ಸ್ವತಂತ್ರರು ಎಂದು ಬೀಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ