ಚುನಾವಣೆ ಡೇಟ್ ಫಿಕ್ಸ್!

ಸೋಮವಾರ, 29 ನವೆಂಬರ್ 2021 (17:09 IST)
ಬೆಂಗಳೂರು : ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಣೆ ಮಾಡಿದೆ.
ಡಿಸೆಂಬರ್ 27 ರಂದು ಮತದಾನ ನಡೆದರೆ ಡಿಸೆಂಬರ್ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
2016 ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾದ 51 ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2021 ಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರ ವಿಂಗಡನೆ ಮಾಡಿ, ವಾರ್ಡ್ ವಾರು ಮೀಸಲಾತಿಯನ್ನು ನಿಗದಿಪಡಿಸಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.
5 ನಗರ ಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು 16 ಡಿಸೆಂಬರ್ ಕೊನೆಯ ದಿನವಾಗಿದೆ. ನಾಪಪತ್ರ ವಾಪಸ್ ಪಡೆಯಲು 18 ಡಿಸೆಂಬರ್ ಕೊನೆಯ ದಿನವಾಗಿದೆ.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಪಾಲನೆ ಮಾಡಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಚುನಾವಣಾ ಅಧಿಸೂಚನೆ - ಡಿಸೆಂಬರ್ 8
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- 15 ಡಿಸೆಂಬರ್
ನಾಮಪತ್ರ ಪರಿಶೀಲಿಸುವ ದಿನ - ಡಿಸೆಂಬರ್ 16
ನಾಮಪತ್ರ ವಾಪಸ್ ಪಡೆಯುವ ದಿನ- ಡಿಸೆಂಬರ್ 18
ಮತದಾನ ನಡೆಯುವ ದಿನ- ಡಿಸೆಂಬರ್ -27
ಮರುಮತದಾನ ಇದ್ದಲ್ಲಿ ನಡೆಸಬೇಕಾದ ದಿನ- ಡಿಸೆಂಬರ್ 29
ಮತ ಎಣಿಕೆ ದಿನ- ಡಿಸೆಂಬರ್ 30

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ