ಸಾರಿಗೆ ಇಲಾಖೆಯ 30 ಸೇವೆಗಳು ಇನ್ನು ಆನ್‌ಲೈನ್‌ನಲ್ಲಿ!

ಮಂಗಳವಾರ, 14 ಡಿಸೆಂಬರ್ 2021 (20:42 IST)
ಕಲಿಕಾ ಚಾಲನಾ ಪರವಾನಿಗೆ ಸೇರಿದಂತೆ ಸಾರಿಗೆ ಇಲಾಖೆಯ 30 ಸೇವೆಗಳು ಇನ್ನು ಆನ್‌ನೈನ್‌ ಲಭ್ಯವಾಗಿದೆ. RTO ಅಧಿಕೃತ ಜಾಲತಾಣವಾದ www.parivahan.gov.in ನಲ್ಲಿ ಸಂಬಂಧಪಟ್ಟವರು ನೇರವಾಗಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಸೇವೆ ಪಡೆಯಬಹುದು.
ಪ್ರಾಯೋಗಿಕವಾಗಿ ಮಂಗಳೂರು, ಬಂಟವಾಳ, ಪುತ್ತೂರು ಮತ್ತು ಉಡುಪಿ ಆರ್‌ಟಿಓ ಕಚೇರಿಗಳಲ್ಲಿ ಈ ಸೌಲಭ್ಯವನ್ನು ತಕ್ಷಣದಿಂದಲೇ ಆರಂಭಿಸಲಾಗಿದೆ.
ಯಾವ ಸೇವೆಗಳು ಆನ್‌ಲೈನ್‌ನಲ್ಲಿ...!
ಕಲಿಕಾ ಚಾಲನ ಅನುಜ್ಞಾ ಪತ್ರ.
ಹೊಸ ವರ್ಗಗಳ ಸೇರ್ಪಡೆ.
ಕಲಿಕಾ ಚಾಲನ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ.
ಕಲಿಕಾ ಚಾಲನ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ.
ನಕಲು ಕಲಿಕಾ ಚಾಲನಾ ಅನುಜ್ಞಾ ಪತ್ರ.
ನಿರ್ವಾಹಕ ಚಾಲನ ಅನುಜ್ಞಾ ಪತ್ರ.
ಸಾರಥಿ ವಿಭಾಗದ 11 ಸೇವೆಗಳು.
ಮಾರಾಟಗಾರರ ಹಂತದಲ್ಲಿ ಹೊಸ ವಾಹನ ನೋಂದಣಿ.
ವಾಹನ ಮಾಲಕತ್ವ ವರ್ಗಾವಣೆ.
ನಕಲು ನೋಂದಣಿ ಪ್ರಮಾಣಪತ್ರ.
ಮೋಟಾರ್ ಕ್ಯಾಬ್ ಪರ್ಮಿಟ್ ನೀಡುವಿಕೆ/ ನವೀಕರಣ.
ಸರಕು ಸಾಗಣೆ ವಾಹನ ರಹದಾರಿ ನೀಡುವಿಕೆ/ ನವೀಕರಣ.
ಆಟೋರಿಕ್ಷಾ ಕ್ಯಾಬ್ ಪರ್ಮಿಟ್ ನವೀಕರಣ ಇತ್ಯಾದಿ 19 ಸೇವೆಗಳು.
ಆನ್‌ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೆ ಮಾತ್ರ RTO ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದ.ಕ. ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ