19 ರ ಯುವತಿಯೊಂದಿಗೆ 32 ವರ್ಷದ ಆಂಟಿ ಎಸ್ಕೇಪ್
ಆಟೋ ಓಡಿಸಿಕೊಂಡು ತಂದೆ-ತಾಯಿಯೊಂದಿಗಿದ್ದ ಯುವಕನಿಗೆ ದಿನಸಿ ಅಂಗಡಿ ಇಟ್ಟುಕೊಂಡ ಮಹಿಳೆ ಜೊತೆ ಸಂಬಂಧವಿತ್ತು. ಇಬ್ಬರ ಸಂಬಂಧದ ಬಗ್ಗೆ ಊರೆಲ್ಲಾ ಸುದ್ದಿ ಹಬ್ಬಿತ್ತು.
ಮೊನ್ನೆ ಇದ್ದಕ್ಕಿದ್ದಂತೆ ಯುವಕ ನಾಪತ್ತೆಯಾಗಿದ್ದು ಅದೇ ದಿನ ಆಂಟಿಯೂ ನಾಪತ್ತೆಯಾಗಿದ್ದಾಳೆ. ಹೀಗಾಗಿ ಇಬ್ಬರೂ ಓಡಿ ಹೋಗಿರಬಹುದೆಂದು ಊರವರು ಅನುಮಾನಿಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರ ಜಾಡು ಹಿಡಿದು ಹೋದ ಪೊಲೀಸರಿಗೆ ತಮಿಳುನಾಡಿಗೆ ಹೋಗಿ ಮದುವೆಯಾಗಿರುವುದು ಗೊತ್ತಾಗಿದೆ. ವಿಧವೆಯಾಗಿರುವ ಆಂಟಿಯೊಂದಿಗೆ ಮಗ ಮದುವೆ ಆಗಿ ಸೆಟ್ಲ್ ಆಗಿದ್ದರೆ, ಇತ್ತ ಪೋಷಕರು ಕಣ್ಣೀರು ಮಿಡಿಯುತ್ತಿದ್ದಾರೆ.