ಆರೋಪಿ ಮಗನ ರಕ್ಷಿಸಲು ಹೋಗಿ ಜೈಲು ಪಾಲಾದ ತಂದೆ
ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ಮಗನನ್ನು ರಕ್ಷಿಸಲು ಆತ ಅಪ್ರಾಪ್ತ ಎಂದು ಅಧಿಕಾರಿಗಳಿಗೆ ಸುಳ್ಳು ದಾಖಲೆ ನೀಡಿ ವಂಚಿಸಲು ತಂದೆ ಯತ್ನಿಸಿದ್ದ. ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ.
ಆತನ ಜನನ ಪ್ರಮಾಣ ಪತ್ರ ಅಸಲಿಯೇ ಎಂದು ವಿಚಾರಿಸಲು ಪೊಲೀಸರು ಹೋದಾಗ ನಿಜ ವಿಚಾರ ಬಯಲಾಗಿತ್ತು. ಆರೋಪ ಸಾಬೀತಾಗಿದ್ದರಿಂದ ತಂದೆಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.