ಈ ಜಿಲ್ಲೆಗೆ 330 ಕೋಟಿ ವೆಚ್ಚದ ವಿದ್ಯಾಲಯ

ಸೋಮವಾರ, 22 ಜೂನ್ 2020 (21:49 IST)
ರಾಜ್ಯದ ಈ ಜಿಲ್ಲೆಯಲ್ಲಿ 330 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾಲಯ ರೂಪುಗೊಳ್ಳಲಿದೆ.

ಚಿಕ್ಕಮಗಳೂರಿನಲ್ಲಿ 330 ಕೋಟಿ  ರೂ.  ವೆಚ್ಚದಲ್ಲಿ  ವೈದ್ಯಕೀಯ  ವಿದ್ಯಾಲಯ, 174 ಕೋಟಿ  ವೆಚ್ಚದಲ್ಲಿ ಆಸ್ಪತ್ರೆ  ನಿರ್ಮಾಣಕ್ಕೆ   ಅನುದಾನ  ಮಂಜೂರಾತಿ  ಆಗಿದೆ.

ಶೀಘ್ರದಲ್ಲಿ ಶಂಕು  ಸ್ಥಾಪನೆ  ನೆರವೇರಿಸಿ  ಕಾಮಗಾರಿ ಪ್ರಾರಂಭ  ಮಾಡಲಾಗುವುದು  ಎಂದು  ಪ್ರವಾಸೋದ್ಯಮ  ಮತ್ತು  ಜಿಲ್ಲಾ  ಉಸ್ತುವಾರಿ  ಸಚಿವ ಸಿ .ಟಿ.  ರವಿ  ಹೇಳಿದ್ದಾರೆ.

ಪಿಳ್ಳೆನಹಳ್ಳಿಯಲ್ಲಿ  ಕೊರೋನಾ  ವಾರಿಯರ್ಸ್ ಗೆ  ಸನ್ಮಾನ  ಮಾಡಿ  ಮಾತನಾಡಿ,  ಕೊರೋನಾ  ಕಾರಣದಿಂದ  ಕಾಮಗಾರಿ  ಆರಂಭ  ಕೊಂಚ  ವಿಳಂಬವಾಗಿದೆ. ಆದಷ್ಟು  ಬೇಗ ಆರಂಭ  ಮಾಡಲಾಗುವುದು. ಜಿಲ್ಲೆಯಲ್ಲಿ ಕೆರೆಗಳನ್ನು  ತುಂಬಿಸಲು ಮುಖ್ಯಮಂತ್ರಿಗಳಿಂದ  ಮೌಖಿಕ  ಅನುಮತಿ ಪಡೆಯಲಾಗಿದೆ ಎಂದಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ