5 ತಿಂಗಳು ಮಗು ಸೇರಿ ಈ ಜಿಲ್ಲೆಯ ಐವರಲ್ಲಿ ಹೊಸದಾಗಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ತಿಂಗಳ ಮಗು ಸೇರಿ ಒಟ್ಟು 5 ಜನರಿಗೆ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ.
22 ವರ್ಷದ ಯುವತಿ, 45 ವರ್ಷದ ಮಹಿಳೆ, 17 ವರ್ಷದ ಯುವಕ, 59 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಇಂದಿನ ಸೋಂಕಿತರಲ್ಲಿ 17 ವರ್ಷದ ಯುವಕ ಮಹಾರಾಷ್ಟ್ರದಿಂದ ಹಿಂತಿರುಗಿದವನಾಗಿದ್ದು, ಉಳಿದ 4 ಜನ ಈ ಮೊದಲು ಸೋಂಕು ಕಂಡು ಬಂದವರ ಸಂಪರ್ಕ ಮಾಡಿದವರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 42 ಕೊರೋನಾ ಪಾಸಿಟಿವ್ ಇದುವರೆಗೆ ಕಂಡು ಬಂದಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.