ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಸುದ್ದಿ ಸಂಸ್ಥೆ ನನ್ನ ಜೊತೆಗೆ 8 ತಿಂಗಳ ಕಾಲ ಇದ್ದು, ಈ ವೀಡಿಯೋ ಮಾಡಿದೆ. ಆದರೆ ಅವರೇ ಹೇಳುವಂತೆ ಮಾತನಾಡಿದ್ದೇವೆ. ಆದರೆ ಯಾವುದೇ ಹಣ ಪಡೆದಿಲ್ಲ ಎಂದು ಹೇಳಿದರು.
ಪ್ರತಿಭಟನೆ ನಿಲ್ಲಿಸಲು ನಾನು ಸಾರಿಗೆ ಸಂಸ್ಥೆಯ ಯಾವುದೇ ಅಧಿಕಾರಿ ಅಥವಾ ಸಚಿವರನ್ನು ಖಾಸಗಿಯಾಗಿ ಭೇಟಿಯಾಗಿಲ್ಲ. ಅವರ ಬಳಿ ಹಣದ ಬೇಡಿಕೆ ಇಟ್ಟಿಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಒಂದೂವರೆ ವರ್ಷದ ಹಿಂದೆ 8 ತಿಂಗಳು ನನ್ನ ಜೊತೆಗಿದ್ದು ಮಾಡಿದ ವೀಡಿಯೋವನ್ನು ಈಗ ಬಿಡುಗಡೆ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.