20 ರ ಯುವತಿ ಜೊತೆಗೆ 40 ವರ್ಷದ ಸ್ವಾಮೀಜಿ ನಾಪತ್ತೆ
ರಾಜ್ಯದಲ್ಲಿ ಮತ್ತೊಬ್ಬ ಸ್ವಾಮೀಜಿ ಇದೀಗ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ. 20 ವರ್ಷದ ಯುವತಿಯೊಂದಿಗೆ 40 ವರ್ಷದ ಸ್ವಾಮೀಜಿಯೊಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗ್ರಾಮವನ್ನು ಹಾಗೂ ಮಠವನ್ನು ಅಭಿವೃದ್ಧಿ ಮಾಡುವೆ ಅಂತ ಹೇಳಿದ್ದ ಸ್ವಾಮೀಜಿ ಇದೀಗ ಯುವತಿಯೊಂದಿಗೆ ಪರಾರಿಯಾಗಿದ್ದು, ಹಲವು ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಯುವತಿಯ ಸೋದರ ಮಾವ ಶಂಕರ್ ಎಂಬಾತ ದೂರು ನೀಡಿದ್ದಾರೆ. ಸ್ವಾಮೀಜಿಯು ಯುವತಿಯನ್ನು ಮದುವೆ ಆಗಿರೋದಾಗಿ ಯುವತಿಯ ಸಹೋದರನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.