ಎಣ್ಣೆಯಿಂದ ಒಂದೇ ದಿನಕ್ಕೆ 45 ಕೋಟಿ ರೂಪಾಯಿ ಕಲೆಕ್ಷನ್

ಸೋಮವಾರ, 4 ಮೇ 2020 (21:46 IST)
ಲಾಕ್ ಡೌನ್ ಸಡಿಲಿಕೆ ಮಾಡಿದ ಪರಿಣಾಮ ಎಣ್ಣೆ ಭಾಗ್ಯ ಕಂಡಿರುವ ಕುಡುಕರಿಂದಾಗಿ ಭರ್ಜರಿ ಕಲೆಕ್ಷನ್ ಆಗಿದೆ.

ರಾಜ್ಯ ಸರಕಾರಕ್ಕೆ ಒಂದೇ ದಿನ 45 ಕೋಟಿ ರೂಪಾಯಿ ಕಲೆಕ್ಷನ್ ಆಗಿರೋ ಸುದ್ದಿ ಹರಿದಾಡುತ್ತಿದೆ.

40 ದಿನಗಳಿಂದ ಮದ್ಯವಿಲ್ಲದೇ ವಿಲವಿಲ ಎಂದು ಪರಿತಪಿಸುತ್ತಿದ್ದ ಎಣ್ಣೆ ಪ್ರಿಯರು ಬೆಳಗ್ಗೆಯಿಂದಲೇ ಬಾರ್ ಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಎಣ್ಣೆ ಕೊಂಡು ಗಂಟಲಿಗೆ ಇಳಿಸಿಕೊಂಡು ಖುಷಿಪಟ್ಟರು.

ಬಹುತೇಕ ಬಾರ್ ಗಳಲ್ಲಿ ಎಣ್ಣೆ ಮಾರಾಟ ಜೋರಾಗಿತ್ತು. ಸರಕಾರದ ನಿರ್ದೇಶನದಂತೆ ನಿಗದಿ ಪಡಿಸಿದ ಬಾಟಲ್ ಗಳನ್ನಷ್ಟೇ ಪ್ರತಿಯೊಬ್ಬ ಕುಡುಕರಿಗೆ ಬಾರ್ ನಲ್ಲಿ ಸೇಲ್ ಮಾಡಲಾಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ