100 ಕ್ಕೂ ಹೆಚ್ಚು ಮದ್ಯದ ಅಂಗಡಿ ಓಪನ್

ಭಾನುವಾರ, 3 ಮೇ 2020 (19:57 IST)
ನೂರಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಓಪನ್ ಆಗಲಿದ್ದು, ಮದ್ಯ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.

ಹಾವೇರಿ ಜಿಲ್ಲೆಯಲ್ಲಿ 104 ಮದ್ಯದಂಗಡಿಗಳು ಆರಂಭಗೊಳ್ಳಲಿದ್ದು, (ಸಿ2 80 ಅಂಗಡಿ, ಎಂ.ಐ.ಎಸ್.ಎಲ್. 24 ಅಂಗಡಿ) ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.

ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿಗದಿಪಡಿಸಿದ ದ್ವಾರದ ಮೂಲಕವೇ ಅಂಗಡಿ ಪ್ರವೇಶ ಹಾಗೂ ನಿರ್ಗಮನ ಮಾಡಬೇಕು. ಒಬ್ಬರಿಗೆ 2.5 ಲೀಟರ್ ಮಾತ್ರ ಮದ್ಯ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮದ್ಯದ ಮಳಿಗೆಗಳಲ್ಲಿ ಮದ್ಯಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಷರತ್ತುಗಳನ್ನು ವಿಧಿಸಲಾಗಿದೆ.

ಮದ್ಯ ಮಳಿಗೆ ಆರಂಭಕ್ಕೆ ಮುನ್ನ ಅಬಕಾರಿ ಅಧಿಕಾರಿಗಳು ಮದ್ಯದ ಸ್ಟಾಕ್‍ನ್ನು ಕಡ್ಡಾಯವಾಗಿ ಚೆಕ್ ಮಾಡಲು ಸೂಚಿಸಲಾಗಿದೆ.

ಸಂಚಾರಿ ಗಸ್ತು ಪಡೆಯನ್ನು ರಚಿಸಲಾಗಿದೆ. ಪ್ರತಿ ಅಂಗಡಿಗಳಿಗೆ ಪೊಲೀಸ್ ಮತ್ತು ಎಕ್ಸ್‍ಸೈಜ್ ಗಾರ್ಡ್‍ಗಳನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ