4 ನೇ ಶನಿವಾರ ರಜೆ ರದ್ದು – ಸರಕಾರಿ ನೌಕರರಿಗೆ ಬಿಗ್ ಶಾಕ್

ಗುರುವಾರ, 12 ಡಿಸೆಂಬರ್ 2019 (18:12 IST)
ರಾಜ್ಯ ಸರಕಾರವೇ ಸರಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದ್ದು, ಶನಿವಾರದ ರಜೆಯನ್ನು ರದ್ದುಗೊಳಿಸಿದೆ.

ಪ್ರತಿ ತಿಂಗಳಿನ 2ನೇ ಹಾಗೂ 4ನೇ ಶನಿವಾರ ಸರಕಾರಿ ನೌಕರರಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ 4ನೇ ಶನಿವಾರದ ರಜೆಯನ್ನು ರದ್ದುಗೊಳಿಸಲಾಗಿದೆ.

4ನೇ ಶನಿವಾರದಂದು ಎಂದಿನಂತೆ ಕೆಲಸ ಮಾಡಬೇಕೆಂದು ಸರಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ತಕ್ಷಣದಿಂದ ಬರುವಂತೆ 4ನೇ ಶನಿವಾರದ ರಜೆಯನ್ನು ರದ್ದುಗೊಳಿಸಿರೋದು ಸರಕಾರಿ ನೌಕರರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ