ಮಾಜಿ ಮೇಯರ್‌ಗಳ ಸಭೆ ಬಳಿಕ ಡಿಕೆಶಿ ಪ್ರತಿಕ್ರಿಯಿಸಿದ್ದು,ಬೆಂಗಳೂರಿನ ಮಾಜಿ ಮೇಯರ್ ಸಭೆ ನಡೆಸಿದ್ದೇನೆಬೆಂಗಳೂರನ್ನ ಯಾವ ರೀತಿ ಅಭಿವೃದ್ಧಿ ಮಾಡಬಹುದು ಅಂತ ಸಲಹೆ ಕೇಳಿದ್ದೇನೆ.ರಿಂಗ್‌ರೋಡ್‌ಗಳಲ್ಲಿ ತ್ಯಾಜ್ಯ ರಸ್ತೆ ಬದಿ ಹಾಕುತ್ತಿದ್ದಾರೆ.ಕೆರೆಗಳಿಗೆ, ಚರಂಡಿಗಳಿಗೆ ಕಸ ಎಸೆಯುತ್ತಿದ್ದಾರೆ.ಈ ಸಂಬಂಧ ಅನೇಕ ಸಲಹೆ ಕೇಳಿದ್ದಾರೆ.ಸೋಮವಾರ ಬೆಂಗಳೂರಿನ ಎಲ್ಲಾ ಪಕ್ಷದ ಶಾಸಕರ ಸಭೆ ಕರೆಯುತ್ತಿದ್ದೇನೆ.ಸರ್ವಪಕ್ಷ ಸಭೆ ನಡೆಸ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆ ಮೇಲೆ ನಮ್ಮ ಪಕ್ಷದ ಶಾಸಕರ ಪ್ರತ್ಯೇಕ ಸಭೆ ಕರೆಯುತ್ತೇನೆ.ಎಲ್ಲರನ್ನ ವಿಶ್ವಾಸಕ್ಕೆ ಪಡೆಯಲು ಅದು ಆಂತರಿಕ ಸಭೆ ನಡೆಸುತ್ತೇನೆ.ಮಾಜಿ ಮೇಯರ್‌ಗಳು ನಮ್ಮ ಸರ್ಕಾರ ಬಂದಿದೆ, ಬೆಂಗಳೂರಿನ ಜನತೆಗೆ ಏನಾದ್ರೂ ಗಿಫ್ಟ್ ಕೊಡಿ ಅಂದ್ರುಮಅದಕ್ಕಾಗಿ ಮೇ 30 ರವರೆಗೆ ಇದ್ದ ತೆರಿಗೆ ವಿನಾಯ್ತಿಯನ್ನ ಜೂನ್ 30 ರವರೆಗೆ ವಿಸ್ತರಣೆ ಮಾಡಿದ್ದೇವೆ.ಜೂನ್ 30 ರವರೆಗೆ ಟ್ಯಾಕ್ಸ್ ಪೇ 5% ಡಿಸ್ಕೌಂಟ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.