1 ಗಂಟೆಯಲ್ಲಿ 5 ಕಿ. ಮೀ. ಓಡಿ ವೃದ್ಧೆಯ ಸಾಧನೆ
ವಯಸ್ಸೆಂಬುದು ಬರಿ ಸಂಖ್ಯೆ ಮಾತ್ರ ಎಂಬುದನ್ನು ಇಳಿವಯಸ್ಸಿನ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.. ಇತ್ತೀಚೆಗೆ ಯುವಕ-ಯುವತಿಯರು ಯೌವ್ವನವಿದ್ದರೂ ಏನು ಸಾಧನೆ ಮಾಡುವುದಿಲ್ಲ. ಆದರೆ ಇಲ್ಲೋರ್ವ ವೃದ್ಧೆ ತನ್ನ 98ನೇ ವಯಸ್ಸಿನಲ್ಲಿ ಒಂದು ಗಂಟೆಯೊಳಗೆ ಐದು ಕಿಲೋಮೀಟರ್ ಓಡಿ ಸಾಧನೆಗೈದಿದ್ದಾರೆ.. USನ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದಲ್ಲಿ ನಡೆದ USATF ಮಾಸ್ಟರ್ಸ್ 5K ಚಾಂಪಿಯನ್ಶಿಪ್ನಲ್ಲಿ ಈ ವೃದ್ಧೆ ಈ ಸಾಧನೆ ಮಾಡಿದ್ದಾರೆ.. ಮುಪ್ಪಿನ ಕಾಲದಲ್ಲಿ ಈ ವೃದ್ಧೆಯ ಸಾಹಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ