ಮಳೆಗೆ ಮನೆಬಿದ್ದರೆ 5 ಲಕ್ಷ ರೂ. ಪರಿಹಾರ ಎಂದ ಸಚಿವ

ಗುರುವಾರ, 13 ಆಗಸ್ಟ್ 2020 (21:36 IST)
ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ದೊರಕಿಸಲಾಗುವುದು ಎಂದು ಸಚಿವರೊಬ್ಬರು ಹೇಳಿದ್ದಾರೆ.


ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದಾಗಿ 250 ಮನೆಗಳಿಗೆ ಹಾನಿಯಾಗಿದ್ದು, ಅವುಗಳ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಪೂರ್ತಿ ಹಾನಿಯಾದ ಮನೆಗಳನ್ನು ಎ ಗ್ರೇಡ್ ನಲ್ಲಿ ಸೇರಿಸಿ ಅವುಗಳಿಗೆ 5 ಲಕ್ಷ ಪರಿಹಾರ ನೀಡಲಾಗುವುದು. ಬಿ ಗ್ರೇಡ್ ಮನೆಗಳಿಗೆ 3 ಲಕ್ಷ ಹಾಗೂ ಸ್ವಲ್ಪ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಹೀಗಂತ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 168 ಶಾಲೆಯ 561 ಕೊಠಡಿಗಳಿಗೆ ಮಳೆಯಿಂದ ಹಾನಿಗೀಡಾಗಿದೆ. ಕಳೆದ ವರ್ಷ ಉಂಟಾದ ಅತಿವೃಷ್ಟಿಯಲ್ಲಿ ಹಾನಿಗೀಡಾದ ಮನೆಗಳಿಗೆ ಪರಿಹಾರ ಬಂದಿಲ್ಲ ಎಂಬ ಮಾತಿದೆ. ತಾಂತ್ರಿಕ ದೋಷ ಇರುವ ಮನೆಗಳಿಗೆ ಮಾತ್ರ ಪರಿಹಾರ ಬಂದಿಲ್ಲ. ಈ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸೂಚನೆ ಕೂಡ ನೀಡಲಾಗಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ