ಬೆಂಗಳೂರು : ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಇಬ್ಬರ ರೈಟರ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಕೃಷ್ಣೇಗೌಡ, ನಿಂಗರಾಜು ಅಮಾನತುಗೊಂಡ ರೈಟರ್ ಗಳು. ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆಯಾಗಿತ್ತು. ಈ ಘಟನೆ ನಡೆಯಲು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದೇ ಕಾರಣವೆಂದು ಆ ವೇಳೆ ಠಾಣೆಯಲ್ಲಿದ್ದ ಇಬ್ಬರು ರೈಟರ್ ಗಳನ್ನು ಅಮಾನತು ಮಾಡುವಂತೆ ಮೈಸೂರು ಎಸ್ ಪಿ ರಿಷ್ಯಂತ್ ಆದೇಶಿಸಿದ್ದಾರೆ.