ಟೊಮೆಟೊ ಕ್ಯಾಂಡಿ ಮಾಡುವುದು ಹೇಗೆ ಗೊತ್ತಾ?

ಗುರುವಾರ, 4 ಜೂನ್ 2020 (08:28 IST)
ಬೆಂಗಳೂರು : ಈ ಲಾಕ್ ಡೌನ್ ಸಮಯದಲ್ಲಿ ಮಕ್ಕಳು ಏನಾದರೂ ಸಿಹಿ ತಿನ್ನಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹೊರಗಿನ ಫುಡ್ ತಂದುಕೊಡುವ ಬದಲು ಮನೆಯಲ್ಲಿಯೇ ಟೊಮೆಟೊ ಕ್ಯಾಂಡಿ ತಯಾರಿಸಿ ಕೊಡಿ.


ಬೇಕಾಗುವ ಸಾಮಾಗ್ರಿಗಳು : 4 ಹಣ್ಣಾದ ಟೊಮೆಟೊ, 1 ಕಪ್ ಕಾರ್ನ್ ಪ್ಲೋರ್, 1ಕಪ್ ಸಕ್ಕರೆ, ಸ್ವಲ್ಪ ತುಪ್ಪ, ಒಣ ಕೊಬ್ಬರಿ ಸ್ವಲ್ಪ.


ಮಾಡುವ ವಿಧಾನ: ಟೊಮೆಟೊ ಹಣ್ಣನ್ನು 4 ಭಾಗವಾಗಿ ಕಟ್ ಮಾಡಿ ಅದರ ಮೇಲೆ ಬಿಸಿ ನೀರನ್ನು ಹಾಕಿ. ಸ್ವಲ್ಪ ಸಮಯದ ಬಳಿಕ ಅದರ ಸಿಪ್ಪೆ ತೆಗೆದು ಕಟ್ ಮಾಡಿಕೊಳ್ಳಿ. ಬಳಿಕ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿ. ಇನ್ನೊಂದು ಪಾತ್ರೆಯಲ್ಲಿ   ಕಾರ್ನ್ ಪ್ಲೋರ್ , ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ರುಬ್ಬಿದ ಟೊಮೆಟೊ ಹಾಗೂ  ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತೀರಿ. ಬಳಿಕ ಅದಕ್ಕೆ ಕಾರ್ನ್ ಪ್ಲೋರ್ ಮಿಕ್ಸ್ ಹಾಕಿ ಮತ್ತೆ ಚೆನ್ನಾಗಿ ತಿರುಗಿಸಿ. ಗಟ್ಟಿಯಾಗುತ್ತಿದ್ದಂತೆ ಅದಕ್ಕೆ ತುಪ್ಪ ಹಾಕಿ ಮಿಶ್ರಣ ತಳ ಬಿಡುವವರೆಗೂ ಮಿಕ್ಸ್ ಮಾಡುತ್ತೀರಿ. ಒಂದು ಪಾತ್ರೆ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ 5 ನಿಮಿಷ ಹಾಗೇ ಬಿಟ್ಟು ಬಳಿಕ ಒಣ ಕೊಬ್ಬರಿ ತುರಿಯನ್ನು ಹಾಕಿ ಕಟ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ