ಭೀಕರ ಚಂಡಮಾರುತಕ್ಕೆ 58 ಜನ ಸಾವು
ಫಿಲಿಪೈನ್ಸ್ನಲ್ಲಿ ಭಯಂಕರ ಪ್ರವಾಹದಿಂದ ಭೂಕುಸಿತ ಉಂಟಾಗಿದೆ. ಈ ಪ್ರಾಕೃತಿಕ ವಿಕೋಪದಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ರಕ್ಷಣಾ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಮಣ್ಣಿನಡಿ ಸಿಲುಕಿ ಜನರು ಉಸಿರು ನಿಲ್ಲಿಸುತ್ತಿದ್ದಾರೆ. ರಕ್ಷಣಾ ಸಿಬ್ಬಂದಿ ತಮ್ಮ ಬರಿಗೈಯಲ್ಲೇ ಮಣ್ಣನ್ನು ಅಗೆದು, ಸಿಲುಕಿರುವ ಜನರನ್ನು ಹೊರ ತೆಗೆಯುತ್ತಿದ್ದಾರೆ. ಇಲ್ಲಿ ಬೆಟ್ಟ-ಗುಟ್ಟಡ್ಡಗಳು ಕುಸಿಯುವುದರ ಜೊತೆ ಮಣ್ಣು, ಚಿಕ್ಕ ಚಿಕ್ಕ ಕಲ್ಲುಗಳ ಮಿಶ್ರಿತ ಮಳೆಯೂ ಬೀಳುತ್ತಿದೆ. ಸುಮಾರು 27 ಜನರು ನಾಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.