ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್
ಪ್ರಕರಣದಲ್ಲಿ ಭೈರತಿ ಬಸವರಾಜ್ ಕೂಡಾ ಎ5 ಆರೋಪಿಯಾಗಿದ್ದರು. ಜಗದೀಶ್ ಎ1 ಆರೋಪಿಯಾಗಿದ್ದ. ಈತನೇ ಸಹಚರರ ಜೊತೆ ಸೇರಿಕೊಂಡು ಸೈಟ್ ವಿಚಾರವಾಗಿ ಶಿವು ಜೊತೆ ಕಿತ್ತಾಡಿಕೊಂಡು ಕೊನೆಗೆ ಮರ್ಡರ್ ಮಾಡಿದ್ದ ಎಂಬುದು ಆರೋಪವಾಗಿತ್ತು.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೆ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ನ್ಯಾ. ಅರುಣ್ ಈ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಜಗದೀಶ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಆದರೆ ಶಾಸಕ ಭೈರತಿ ಬಸವರಾಜ್ ಸದ್ಯಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.