64ಕೋಟಿಯಲ್ಲಿ ಕೆಂಪೇಗೌಡ ಪ್ರತಿಮೆ ...!!!

ಗುರುವಾರ, 1 ಸೆಪ್ಟಂಬರ್ 2022 (15:58 IST)
64 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 108 ಅಡಿ ಎತ್ತರದ ಪ್ರತಿಮೆ ಇದಾಗಿದೆ. 98.ಕೆ.ಜಿ ಕಂಚು, 120ಕೆ.ಜಿ ಸ್ಟೀಲ್ ಬಳಸಿ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಮುಂಭಾಗದ ಥೀಮ್ ಪಾರ್ಕ್ ಗೆ ರಾಜ್ಯದ ಪ್ರತಿ ಹಳ್ಳಿಯಿಂದ ಪವಿತ್ರ ಮಣ್ಣು ಮತ್ತು ಕೆರೆ ನೀರು ಸಂಗ್ರಹ ಮಾಡಿ ತಂದು ನಿರ್ಮಿಸಲಾಗುವುದು. ರಾಜ್ಯಾದ್ಯಂತ 45 ದಿನಗಳ ಕಾಲ ಕೆಂಪೇಗೌಡರ ರಥ ಸಂಚರಿಸಲಿದೆ.
 
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದ ಬಳಿ ಕೆಂಪೇಗೌಡರ ಪ್ರಗತಿ ಪ್ರತಿಮೆ ನಿರ್ಮಾಣ ಆಗಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಆಗಲಿದೆ. ಸಿ.ಎಂ.ರವರಿಗೆ ಸಚಿವ ಅಶ್ವಥ ನಾರಾಯಣ, ಗೋಪಾಲಯ್ಯ, ಆರ್. ಅಶೋಕ್, ವಿಶ್ವನಾಥ್, ಸಂಸದ ಪಿಸಿ ಮೋಹನ್, ದೇವನಹಳ್ಳಿ ನಿಸರ್ಗ ನಾರಾಯಣ ಸ್ವಾಮಿ ಸಾಥ್ ನೀಡಿದರು..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ