7 ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿ ಪ್ರತ್ಯಕ್ಷ

ಗುರುವಾರ, 31 ಮಾರ್ಚ್ 2022 (17:36 IST)
ಹೆಂಡತಿ ಮೇಲಿನ ಬೇಸರಕ್ಕೆ ಏಳು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿ ಮತ್ತೆ ಪತ್ತೆಯಾಗಿದ್ದಾರೆ.
 
ಕೋಟೆಪ್ಪ ಎನ್ನುವವರು 201 ರಲ್ಲಿ ಸವಿತಾ ಎಂಬಾಕೆಯನ್ನ ಪ್ರೀತಿಸಿ ಮದ್ವೆಯಾಗಿದ್ದರು. ಮದುವೆ ಬಳಿಕ ಆರಂಭವಾಗ ಕೌಟುಂಬಿಕ ಕಲಹದಿಂದ ಬೇಸತ್ತ ಕೋಟೆಪ್ಪ 2015ರಲ್ಲಿ ಬೆಂಗಳೂರು ಬೇಡ ಸಂಸಾರವೂ ಬೇಡ ಎಂದು ಮನೆ ಬಿಟ್ಟು ನಾಪತ್ತೆಯಾಗಿದ್ದರು.
ಬನ್ನೇರುಘಟ್ಟ ರಸ್ತೆಯ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೋಟೆಪ್ಪ ಕೈತುಂಬ ಬರುವ ಸಂಬಳ ಬಿಟ್ಟು ಒರಿಸ್ಸಾ ಸೇರಿದ್ದರು.
 
ಇತ್ತೀಚೆಗೆ ತಂದೆ ಅನಾರೋಗ್ಯಕ್ಕೀಡಾದರು ಎಂದು ಬಂದಿದ್ದ ಕೋಟೆಪ್ಪ ಕಳೆದ ಒಂದು ವಾರದ ಹಿಂದೆ ಖಾಸಗಿ ಬ್ಯಾಂಕ್ ನಲ್ಲಿ 10 ಸಾವಿರ ಎಫ್.ಡಿ ಮಾಡಿಸಿದ್ದಾರೆ. ಎಫ್​.ಡಿ ಮಾಡಿರುವ ಮಾಡಿರುವ ಮೆಸೇಜ್​ ಹೆಂಡತಿ ಮೊಬೈಲ್​ಗೆ ಬಂದಿದ್ದು, ಮೆಸೇಜ್​ ಆಧರಿಸಿ ಆಡುಗೋಡಿ ಪೊಲೀಸರು ಕೋಟೆಪ್ಪನನ್ನು ಹುಡುಕಿ ಪತ್ನಿಗೆ ಒಪ್ಪಿಸಿದ್ದಾರೆ.
 
ಕೌಟುಂಬಿಕ ಕಲಹಕ್ಕೆ ಬೇಸತ್ತು ಮನೆ ಬೇಡ, ಪತ್ನಿ ಬೇಡ ಎಂದು ಹೋಗಿದ್ದ ಕೋಟೆಪ್ಪ ಇದೀಗ ಮತ್ತೆ ಪತ್ನಿಗೆ ಸಿಕ್ಕಿದ್ದು, ಆತನ ಮುಂದಿನ ನಿರ್ಧಾರ ಏನು ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ