ಬೀಜಿಂಗ್ : ಚೀನಾದ ನಗರ ಶಾಂಘೈನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
ಸರಕು ಸಾಗಣೆಗೆ ಪ್ರಮುಖ ಬಂದರು ತಾಣವಾಗಿದ್ದ ಶಾಂಘೈನಲ್ಲಿ ಲಾಕ್ಡೌನ್ ಘೋಷಿಸಿರುವುದು ಭಾರತಕ್ಕೆ ದೊಡ್ಡ ಪೆಟ್ಟು ನೀಡಿದೆ. ಭಾರತದ ಔಷಧೀಯ ಉದ್ಯಮಕ್ಕೆ ಆತಂಕ ಎದುರಾಗಿದೆ.
ಕೋವಿಡ್ ಏಕಾಏಕಿ ನಿಗ್ರಹಿಸಲು ಚೀನಾ ಹಂತಹಂತವಾಗಿ ಲಾಕ್ಡೌನ್ ಅನ್ನು ವಿಧಿಸಿದೆ. ಇದರಿಂದಾಗಿ ಅದರ ಎರಡು ಪ್ರಮುಖ ಬಂದರುಗಳಾದ ಶಾಂಘೈ ಮತ್ತು ಶೆನ್ಜೆನ್ನಲ್ಲಿ ಸರಕು ಸಾಗಣೆ ವಿಳಂಬವಾಗಿದೆ. ಶೆನ್ಜೆನ್ನಲ್ಲಿ ಕಾರ್ಗೋ ಕಾರ್ಯಾಚರಣೆಗಳು ಅಸ್ತವ್ಯಸ್ತಗೊಂಡಿವೆ.
ವಿಶ್ವದ ಅತಿದೊಡ್ಡ ಕಂಟೈನರ್ ಶಿಪ್ಪಿಂಗ್ ಬಂದರಿಗೆ ನೆಲೆಯಾಗಿರುವ ಶಾಂಘೈನಲ್ಲಿ ಲಾಕ್ಡೌನ್ ವಿಧಿಸಿರುವುದು ಮುಂದಿನ ದಿನಗಳಲ್ಲಿ ಸರಕು ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.