ಒಂದೇ ದಿನ 8 ಹೊಸ ಕೊರೊನಾ ಕೇಸ್ : ಬೆಚ್ಚಿ ಬಿದ್ದ ಕಲಬುರಗಿ

ಬುಧವಾರ, 29 ಏಪ್ರಿಲ್ 2020 (14:06 IST)
ಒಂದೇ ದಿನ ಎಂಟು ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು, ಕಲಬುರಗಿ ಜಿಲ್ಲೆಯ ಜನರು ಬೆಚ್ಚಿ ಬೀಳುವಂತಾಗಿದೆ.  

ಕೊರೊನಾ ಪೀಡಿತರ ಸಂಪರ್ಕಕ್ಕೆ ಬಂದ ಎಂಟು ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ.  ರೋಗಿ ಸಂಖ್ಯೆ 395 ರ ಸಂಪರ್ಕಕ್ಕೆ ಬಂದ ನಾಲ್ಕುವರೆ ವರ್ಷದ ಬಾಲಕಿ, ರೋಗಿ ಸಂಖ್ಯೆ 425 ರ ನೇರ ಸಂಪರ್ಕಕ್ಕೆ ಬಂದ 14 ವರ್ಷದ ಬಾಲಕಿ, 40 ವರ್ಷದ ಮಹಿಳೆ, 17 ವರ್ಷದ ಯುವತಿ ಮತ್ತು 12 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರೋಗಿ ಸಂಖ್ಯೆ 525 ರ ಸಂಪರ್ಕಕ್ಕೆ ಬಂದ  28 ವರ್ಷದ ವ್ಯಕ್ತಿ ಹಾಗೂ ರೋಗಿ ಸಂಖ್ಯೆ 205 ರ ಸಂಪರ್ಕಕ್ಕೆ ಬಂದ 20 ವರ್ಷದ ಯುವಕನಲ್ಲಿ ವೈರಸ್ ಕಾಣಿಸಿಕೊಂಡಿದೆ.

ಕಲಬುರಗಿ ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 5 ಕ್ಕೆ ತಲುಪಿದೆ. ಇದುವರೆಗೂ ಪ್ರಾಥಮಿಕ ಸಂಪರ್ಕದ 688, ದ್ವಿತೀಯ ಸಂಪರ್ಕದ 2,504 ಹಾಗೂ 488 ವಿದೇಶಿ ಪ್ರಯಾಣಿಕರನ್ನು ಗುರುತಿಸಲಾಗಿದೆ.

1,455 ಜನರು ಹೋಂ ಕ್ವಾರಂಟೈನ್ ನಲ್ಲಿದ್ದರೆ, 981 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 224 ಜನರು ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 3,667 ಜನರ ಮಾದರಿಗಳಲ್ಲಿ 52 ಜನರ ರಿಪೋರ್ಟ್ ಪಾಸಿಟಿವ್ ಬಂದಿದೆ. 7 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ