ಡೆಡ್ಲಿ ಕೊರೊನಾಕ್ಕೆ ವ್ಯಕ್ತಿ ಬಲಿ : ರಾಜ್ಯದಲ್ಲೇ ಹೆಚ್ಚು ಸಾವು ಕಂಡ ಜಿಲ್ಲೆ

ಮಂಗಳವಾರ, 28 ಏಪ್ರಿಲ್ 2020 (13:58 IST)
ಕೊರೋನಾ ಸೋಂಕಿನಿಂದ 57 ವರ್ಷದ ವ್ಯಕ್ತಿ ನಿಧನರಾಗಿದ್ದಾರೆ. ಈ ಮೂಲಕ ಡೆಡ್ಲಿ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಶರಣ ನಗರದ 57 ವರ್ಷದ ವ್ಯಕ್ತಿ ಏಪ್ರಿಲ್ 27 ರಂದು ನಿಧನರಾಗಿದ್ದಾರೆ. ಹೀಗಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ. 

ಮೃತ ವ್ಯಕ್ತಿ ಸೋಲಾಪುರ ಪ್ರವಾಸ ಹಿನ್ನೆಲೆ ಹೊಂದಿದ್ದನು. ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 21 ರಂದು ಕಲಬುರಗಿ ಕೋವಿಡ್-19 ಆಸ್ಪತೆಯಲ್ಲಿ ದಾಖಲಾಗಿದ್ದರು.  ಏಪ್ರಿಲ್ 22 ರಂದು ಅವರಲ್ಲಿ ಕೋವಿಡ್-19 ದೃಢವಾಗಿತ್ತು.

ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 5 ಕ್ಕೆ ಏರಿಕೆಯಾದಂತಾಗಿದೆ. ಇದುವರೆಗೂ ಪ್ರಾಥಮಿಕ ಸಂಪರ್ಕದ 688, ದ್ವಿತೀಯ ಸಂಪರ್ಕದ 2,504 ಹಾಗೂ 488 ವಿದೇಶಿ ಪ್ರಯಾಣಿಕರನ್ನು ಗುರುತಿಸಲಾಗಿದೆ.

1,455 ಜನರು ಹೋಂ ಕ್ವಾರಂಟೈನ್ ನಲ್ಲಿದ್ದರೆ, 981 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 224 ಜನರು ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 3,667 ಜನರ ಮಾದರಿಗಳಲ್ಲಿ 44 ಜನರ ರಿಪೋರ್ಟ್ ಪಾಸಿಟಿವ್ ಬಂದಿದೆ. 7 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ