ಮೆಡಿಕಲ್ ಸೀಟು ಹಂಚಿಕೆ: ಖರ್ಗೆ ಅಳಿಯನ ವಿರುದ್ಧ 800 ಕೋಟಿ ರೂ. ಹಗರಣ ಆರೋಪ

Krishnaveni K

ಸೋಮವಾರ, 6 ಮೇ 2024 (17:01 IST)
Photo Courtesy: Twitter
ಬೆಂಗಳೂರು: ಡಾ ಬಿಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಂಚಿಕೆಯಲ್ಲಿ 800 ಕೋಟಿ ರೂ. ಹಗರಣ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಳಿಯ, ಕಲಬುರಗಿ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.

ಮಾಜಿ ಕಾರ್ಪೋರೇಟರ್ ಎಂಎನ್ ರಮೇಶ್ ಈ ಆರೋಪ ಮಾಡಿದ್ದಾರೆ. ರಾಧಾಕೃಷ್ಣ ದೊಡ್ಡಮನಿ ಅಂಬೇಡ್ಕರ್ ಕಾಲೇಜಿನ ಮುಖ್ಯಸ್ಥರಾಗಿದ್ದಾರೆ. ಈ ಕುರಿತಾಗಿ ಸುಮಾರು 900 ಪುಟಗಳ ಆರೋಪ ಪಟ್ಟಿ ಹೊರಿಸಲಾಗಿದೆ. ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ.

ರಾಧಾಕೃಷ್ಣ ಆಪ್ತ ಅಮಾನುಲ್ಲಾ ಖಾನ್ ಪಿಯು ಫೇಲಾದ ವಿದ್ಯಾರ್ಥಿಗಳಿಗೂ ಸೀಟು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈವರೆಗೆ 6 ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶ್ರೀಮಂತರ ಮಕ್ಕಳಿಗೆ ಹಣ ಪಡೆದು ಅಕ್ರಮವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಕಳೆದ 15 ವರ್ಷಗಳಿಂದ ಖರ್ಗೆ ಅಳಿಯ ಅಂಬೇಡ್ಕರ್ ಕಾಲೇಜಿನ ಆಡಳಿತ ವಹಿಸಿಕೊಂಡ ಮೇಲೆ ಈ ರೀತಿ ನೂರಾರು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ಎಂಎನ್ ರಮೇಶ‍್ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ