ನಾಳೆಯಿಂದ ರಾಜ್ಯದಲ್ಲಿ ಮಳೆ ಬರುವ ಹಾಗಿದೆ: ಎಲ್ಲೆಲ್ಲಿ ಮಳೆಯಾಗಲಿದೆ ಇಲ್ಲಿದೆ ಡೀಟೈಲ್ಸ್

Krishnaveni K

ಸೋಮವಾರ, 6 ಮೇ 2024 (09:55 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾಳೆಯಿಂದ ಒಂದು ವಾರ ಕಾಲ ಅಲ್ಲಲ್ಲಿ ಮಳೆಯಾಗುವ ಸೂಚನೆಯಿದೆ. ಈ ಬಗ್ಗೆ ಹವಾಮಾನ ವರದಿ ಇಲ್ಲಿದೆ.

ಈಗಾಗಲೇ ಬೆಂಗಳೂರಿನಲ್ಲಿ ಎರಡು ದಿನ ಮಳೆಯಾಗಿತ್ತು. ಸತತ ದಾಖಲೆಯ ತಾಪಮಾನದಿಂದ ಹೈರಾಣಾಗಿದ್ದ ಬೆಂಗೂರಿಗೆ ಈ ಮಳೆ ಕೊಂಚ ಸಮಾಧಾನ ತಂದಿತ್ತು. ಇದೀಗ ಈ ವಾರ ಮತ್ತಷ್ಟು ಮಳೆಯಾಗುವ ಸೂಚನೆ ಕಂಡುಬಂದಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ರಾಜ್ಯಗಳಲ್ಲೂ ಮಳೆಯ ಸೂಚನೆಯಿದೆ. ಎಲ್ಲೆಲ್ಲಿ ಮಳೆಯಾಗಲಿದೆ ಎಂಬ ಡೀಟೈಲ್ಸ್ ಇಲ್ಲಿದೆ.

ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮುಂತಾದೆಡೆ ಇಂದು ಮಳೆಯ ಸೂಚನೆಯಿದೆ.

ಇನ್ನು ಕೆಲವೆಡೆ ನಾಳೆಯಿಂದ ಮಳೆಯಾಗಲಿದೆ. ಈಗಾಗಲೇ ಬೇಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯ ಸೂಚನೆಯಿದೆ.  ಬೆಂಗಳೂರಿನಲ್ಲಿ ಈಗ ಗರಿಷ್ಠ 39 ಡಿಗ್ರಿ ತಾಪಮಾನವಿದೆ. ಮಧ್ಯಾಹ್ನದ ಬಳಿಕ ಮಳೆಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ