2 ಲಕ್ಷ ರೈತರ 868 ಕೋಟಿ ಸಾಲ ಮನ್ನಾ?
ರಾಜ್ಯದ ಎರಡು ಲಕ್ಷ ರೈತರ 868 ಕೋಟಿ ಸಾಲ ಮನ್ನಾ ಆಗಿದೆ. 18 ಸಾವಿರ ಬೀದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ ಸಾಲ ಕೊಟ್ಟಿದ್ದೇವೆ. 10.32 ಕೋಟಿ ಸಾಲವನ್ನ ನೀಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸುದ್ದಿಗೋಷ್ಠಿ ನಡೆಸಿದ್ದಾರೆ. ರೈತರ ಸಾಲ ಮನ್ನಾ ವಿಚಾರವಾಗಿ ಮಾತನಾಡಿರುವ ಅವರು, 18.71 ಲಕ್ಷ ರೈತರು ಸಾಲ ಮನ್ನಾ ವ್ಯಾಪ್ತಿಯಲ್ಲಿದ್ದಾರೆ. ರೈತರ 1 ಲಕ್ಷದವರೆಗೆ ಸಾಲ ಮನ್ನಾ ಆಗಿದೆ. 2600 ಕೋಟಿ ಆರ್ಥಿಕ ಇಲಾಖೆಯಿಂದ ಸಹಕಾರಿ ಬ್ಯಾಂಕ್ ಗಳಿಗೆ ಬಂದಿದೆ. ಇನ್ನೂ 1500 ಕೋಟಿ ಹಣ ಬರಬೇಕಿದೆ. ಕೋ ಆಪರೇಟಿವ್ ಬ್ಯಾಂಕ್ ವ್ಯಾಪ್ತಿಗೆ ಬರುವ ರೈತರು ಆತಂಕ ಪಡಬೇಕಿಲ್ಲ ಎಂದರು.
ಮಾರ್ಚ್ ಅಂತ್ಯಕ್ಕೆ 45 ಕೋಟಿವರೆಗೆ ಸಾಲ ತಲುಪಿಸಲು ಸೂಚಿಸಿದ್ದೇವೆ ಎಂದು ಸಚಿವ ಬಂಡೆಪ್ಪ ಖಾಶಂಪೂರ ಹೇಳಿಕೆ ನೀಡಿದ್ದಾರೆ. 15.5 ಲಕ್ಷ ರೈತರ ಮಾಹಿತಿ ರಾಷ್ಟ್ರೀಯ ಬ್ಯಾಂಕ್ ಗಳಿಂದ ಬಂದಿದೆ. ರೈತರ ಸಾಲ ಮನ್ನಾ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದಿದ್ದಾರೆ.