ಸಾಲ ಮನ್ನಾ ಘೋಷಣೆ ಮಾಡಿ ತಾತ್ಕಾಲಿಕವಾಗಿ ರೈತರನ್ನು ಖುಷಿ ಪಡಿಸಲಾರೆ-ಪ್ರಧಾನಿ ಮೋದಿ

ಸೋಮವಾರ, 25 ಫೆಬ್ರವರಿ 2019 (09:29 IST)
ಗೋರಖ್ ಪುರ : ರೈತರ ಸಾಲಮನ್ನಾ ಮಾಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂಷಿಸುತ್ತಿರುವ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಕ ಉತ್ತರ ನೀಡಿದ್ದಾರೆ.


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು,’ ಸಾಲಮನ್ನಾ ಎಲ್ಲ ರೈತರ ಹಿತ ಕಾಯಲಾರದು. ಸಾಲ ಮನ್ನಾ ಘೋಷಣೆ ಮಾಡಿ ತಾತ್ಕಾಲಿಕವಾಗಿ ರೈತರನ್ನು ಖುಷಿ ಪಡಿಸುವುದು ತುಂಬ ಸುಲಭದ ಸಂಗತಿ. ಚುನಾವಣೆ ಲಾಭಕ್ಕಾಗಿ ಅಂತಹ 'ಸಿಹಿ ತಿಂಡಿ' ಹಂಚಿ ವಂಚಿಸುವುದು ನಮಗೆ ಕಷ್ಟವಾಗಲಾರದು. ಅಂತಹ ಅಪರಾಧ ಮಾಡಲು ನಮ್ಮ ಮನಸ್ಸು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.


‘ಸೋಮಾರಿತನ ಹಾಗೂ ನೀಡಿದ ಭರವಸೆ ಈಡೇರಿಸದೇ ವಂಚಿಸುವ ವಿಷಯದಲ್ಲಿ ಕಾಂಗ್ರೆಸ್‌ ಮತ್ತು ಮಹಾಕಲಬೆರಕೆ ಕೂಟ (ಎಸ್ಪಿ-ಬಿಎಸ್ಪಿ) ಒಂದೇ ನಾಣ್ಯದ ಎರಡು ಮುಖಗಳು. ಈ ಹಿಂದೆ ಸತತ ಹತ್ತು ವರ್ಷ ಅಧಿಕಾರದಲ್ಲಿದ್ದ ಈ ಜನ ರೈತರನ್ನು ನೆನಪಿಸಿಕೊಂಡದ್ದು ಚುನಾವಣೆ ಸಂದರ್ಭದಲ್ಲಿ ಒಮ್ಮೆ ಮಾತ್ರ. ಕೃಷಿ ಸಾಲಮನ್ನಾ ಕೆಲವರಿಗೆ ಮಾತ್ರ ದಕ್ಕಿತು. ಅಂದು ಅವರು ನಿಮ್ಮನ್ನು ಮೂರ್ಖರನ್ನಾಗಿಸಿ ವೋಟು ಪಡೆದು ಹೋಗಿದ್ದರು’ ಎಂದು ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ