ಆರ್ಕಿಡ್‌ ಶಾಲೆಯಲ್ಲಿ 9, 10ನೇ ತರಗತಿ ನಡೆಯುತ್ತಿಲ್ಲ- ಮಕ್ಕಳ ಭವಿಷ್ಯ ಅತಂತ್ರ

ಬುಧವಾರ, 25 ಜನವರಿ 2023 (18:26 IST)
ಕೇಂದ್ರ ಸರ್ಕಾರದಿಂದ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಟರಿ ಎಜುಕೇಶನ್‌ ಅನುಮತಿ ಪಡೆಯದಿದ್ದರೂ, ತಮ್ಮದು ಸಿಬಿಎಸ್‌ಇ ಸಿಲಬಸ್‌ ಹೊಂದಿದ ಶಾಲೆಯೆಂದು ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ಪಡೆದು ಮಕ್ಕಳ ದಾಖಲಾಗಿ ಮಾಡಿಕೊಂಡಿರುವ ಆರ್ಕಿಡ್‌ ಇಂಟರ್‌ನ್ಯಾಷನಲ್‌ ಶಾಲೆಯ ಕರ್ಮಕಾಂಡ ಹೊರಬಿದ್ದಿದೆ. ಆದರೆ, ಶಾಲೆ ಪರಿಶೀಲನೆಗೆ ಬಂದಿರುವ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಶಾಲೆಯಲ್ಲಿ 9 ಮತ್ತು 10 ನೇ ತರಗತಿ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂ. ಹಣ ಪಾವತಿಸಿ ಮಕ್ಕಳನ್ನು ದಾಖಲು ಮಾಡಿರುವ ಪೋಷಕರು ಹಾಗೂ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಶಾಲೆಯಲ್ಲಿ ವರ್ಷಪೂರ್ತಿ ಸಿಬಿಎಸ್‌ಇ ಪಠ್ಯಕ್ರಮ ಆಧರಿಸಿ ಪಾಠ ಬೋಧನೆ ಮಾಡಿದ್ದು, ಈಗ ಪರೀಕ್ಷೆ ವೇಳೆ ರಾಜ್ಯದ ಸಿಲೆಬಸ್‌ ಆಧರಿಸಿ ಪರೀಕ್ಷೆ ಬರೆಯುವಂತೆ ಶಾಲೆ ಆಡಳಿತ ಮಂಡಳಿ ತಿಳಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ