70ರ ವೃದ್ಧೆ ಮೇಲೆ 28ರ ಯುವಕನ ಅತ್ಯಾಚಾರ!
ತಾಲೂಕಿನ ಅಣ್ಣೂರು ಗ್ರಾಮದಲ್ಲಿ 70 ವರ್ವದ ವೃದ್ಧೆಯ ಮೇಲೆ 28 ವರ್ಷದ ಯುವಕನಿಂದ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಕೆಲ ವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ವೃದ್ಧೆ ತನ್ನ ಮೊಮ್ಮಗಳ ಮನೆಯಲ್ಲಿ ವಾಸವಾಗಿದ್ದಾಗ, ಆಳಂದ ತಾಲೂಕಿನ ಗ್ರಾಮವೊಂದರ ಸಂತೋಷ್ ಎಂಬ ಯುವಕ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಭಾನುವಾರ ಮಧ್ಯಾಹ್ನ ವೃದ್ಧೆಯ ಮೊಮ್ಮೊಗಳು ಬಾಗಿಲು ಮುಚ್ಚಿಕೊಂಡು ಹೊರಹೋಗಿದ್ದಳು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಸಂತೋಷ್ ಮನೆಗೆ ಬಂದು ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.