ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ತಿಳಿಯಲು ಉಗುರಿನ ಆಕಾರ ನೋಡಿದರೆ ಸಾಕು. ಅದುವೇ ನೀವು ಎಂಥಾ ವ್ಯಕ್ತಿ ಎಂಬುದನ್ನು ತಿಳಿಸುತ್ತದೆ. ಯಾವ ಆಕಾರದಲ್ಲಿ ಉಗುರು ಇದ್ದರೆ ಏನು ಸೂಚಿಸುತ್ತದೆ ಇಲ್ಲಿದೆ ನೋಡಿ ವಿವರ.
ಕಿರಿದಾದ ಮತ್ತು ಉದ್ದ ಉಗುರು: ಕಾಲ್ಪನಿಕ, ಸ್ವತಂತ್ರವಾಗಿ ಯೋಚಿಸುವ, ಕಲಾ ಪ್ರೇಮಿಗಳಾಗಿರುತ್ತೀರಿ ಮತ್ತು ನಿಮ್ಮ ಸುತ್ತಮುತ್ತಲಿನ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೀರಿ.
ಅಗಲ ಉಗುರು: ನೇರವಾಗಿ ಇದ್ದದ್ದನ್ನು ಇದ್ದ ಹಾಗೇ ಹೇಳುವ, ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ವಿಮರ್ಶೆ ಮಾಡುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ.
ಚೌಕ ಆಕಾರದ ಉಗುರು: ಸಾಹಸಿಗಳು, ಧೈರ್ಯವಂತರು ಮತ್ತು ಕಠಿಣ ಮನಸ್ಥಿತಿಯವರಾಗಿರುತ್ತೀರಿ.
ವೃತ್ತ ಅಥವಾ ಓವಲ್ ಆಕಾರ: ಆಶಾವಾದಿಗಳು, ಶಾಂತ ಸ್ವಭಾವದವರು, ಒಂದು ವಿಚಾರದ ಬಗ್ಗೆ ಗಮನ ಕೇಂದ್ರೀಕರಿಸುವ ಗುಣದವರಾಗಿರುತ್ತೀರಿ.
ಬಾದಾಮಿಯ ಆಕಾರದಲ್ಲಿದ್ದರೆ: ಪ್ರಾಮಾಣಿಕರಾಗಿರುತ್ತೀರಿ ಮತ್ತು ಯಾವುದೇ ವಿಚಾರದ ಬಗ್ಗೆ ಸೂಕ್ಷ್ಮ ಸಂವೇದನೆ ಹೊಂದಿರುತ್ತೀರಿ.