ರಾಜ್ಯಕ್ಕೆ ‘ಬ್ರ್ಯಾಂಡ್ ಮೋದಿ’ ಅಸ್ತ್ರ ಪ್ರಯೋಗ

ಮಂಗಳವಾರ, 7 ಫೆಬ್ರವರಿ 2023 (09:33 IST)
ಬೆಂಗಳೂರು : ಬಿಜೆಪಿ ಕರ್ನಾಟಕ ಮತಯುದ್ಧಕ್ಕೆ ಪ್ರಧಾನಿ ಮೋದಿಯೇ ಸಾರಥಿಯಾಗಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿಯವರು ಬ್ಯಾಕ್ ಟು ಬ್ಯಾಕ್ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.

ಆ ಮೂಲಕ ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಗೆಲುವಿನ ಜಯಭೇರಿ ಬಾರಿಸಲು ಪಣ ತೊಟ್ಟಿದ್ದಾರೆ. 2023ರ ವಿಧಾನಸಭಾ ಚುನಾವಣೆಗೆ ಬ್ರಾಂಡ್ ಮೋದಿ ಅಸ್ತ್ರ ಭರ್ಜರಿಯಾಗಿಯೇ ಪ್ರಯೋಗವಾಗುತ್ತಿದೆ.

ಪ್ರತೀ ಬಾರಿಯೂ ಬಂದಾಗಲೂ ಅಭಿವೃದ್ಧಿ ಮಂತ್ರದಂಡ ಹಿಡಿದೇ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ವಿಭಾಗವಾರು ಜಿಲ್ಲೆಗಳನ್ನು ಫೋಕಸ್ ಮಾಡಿಕೊಂಡು ತಮ್ಮ ರಾಜ್ಯ ಪ್ರವಾಸವನ್ನು ಪ್ರಧಾನಿಗಳು ನಿಗದಿ ಮಾಡಿಕೊಳ್ಳುತ್ತಿದ್ದಾರೆ.

ಈ ಮುಂಚೆ ಹಳೇ ಮೈಸೂರು, ಕರಾವಳಿ, ಕಲ್ಯಾಣ, ಕಿತ್ತೂರು ಕರ್ನಾಟಕ ಜಿಲ್ಲೆಗಳಿಗೆ ಭೇಟಿ ಕೊಡುವ ಮೂಲಕ ಮೋದಿಯವರು ಮೋಡಿ ಮಾಡಿದ್ದಾರೆ. ಈ ತಿಂಗಳು ಬೆಂಗಳೂರು, ಬಯಲು ಸೀಮೆ, ಮಲೆನಾಡು ಜಿಲ್ಲೆಗಳ ಮೇಲೆ ಚಿತ್ತ ಹರಿಸಿದ್ದಾರೆ.

ಕಳೆದ ಜೂನ್ನಿಂದಲೂ ಮೋದಿಯವರು ನಿರಂತರ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿಯವರ ಪದೇ ಪದೇ ಕರ್ನಾಟಕ ಭೇಟಿ ಇನ್ನಷ್ಟು ಹೆಚ್ಚಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ