ಚಿಕ್ಕೋಡಿ : ಅಮಿತ್ ಶಾ ಖಡಕ್ ವಾರ್ನಿಂಗ್ ಬಳಿಕ ಬೆಳಗಾವಿ ಬಿಜೆಪಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ.
ಇಷ್ಟು ದಿನ ನಾ ಒಂದು ದಿಕ್ಕು ತಾ ಒಂದು ದಿಕ್ಕು ಎಂದು ಮುಖ ತಿರುಗಿಸಿ ಓಡಾಡುತ್ತಿದ್ದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ಇದೀಗ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಇಬ್ಬರು ನಾಯಕರು ಜೊತೆ ಜೊತೆಯಾಗಿ ಸಂಚಾರ ನಡೆಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇಷ್ಟು ದಿನ ಒಬ್ಬರ ಕಾರ್ಯಕ್ರಮಕ್ಕೆ ಒಬ್ಬರು ಗೈರಾಗುತ್ತಿದ್ದರು. ಆದರೆ ಅಮಿತ್ ಶಾ ಖಡಕ್ ವಾರ್ನಿಂಗ್ ಬಳಿಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಇದೀಗ ಇಬ್ಬರು ನಾಯಕರು ಒಗ್ಗಟ್ಟಿನಿಂದ ಮುದುವರಿಯುತ್ತಿರುವುದಕ್ಕೆ ಪಕ್ಷದ ಕಾರ್ಯಕರ್ತರ ಗೊಂದಲ ನಿವಾರಣೆ ಆದಂತಾಗಿದೆ. ಬೆಳಗಾವಿಗೆ ಅಮಿತ್ ಶಾ ಭೇಟಿ ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡಾ ಭಿನ್ನಮತ ಶಮನಕ್ಕೆ ಯತ್ನಿಸಿದ್ದರು. ಇಬ್ಬರು ರಾಷ್ಟ್ರೀಯ ನಾಯಕರ ಭೇಟಿ ನಂತರ ಬಿಜೆಪಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.