ಕಟ್ಟಡಕ್ಕೆ ಬೆಂಕಿ; ಕೆಳಗೆ ಜಿಗಿದ ಜನ

ಗುರುವಾರ, 29 ಡಿಸೆಂಬರ್ 2022 (18:24 IST)
ಕಾಂಬೋಡಿಯಾದಲ್ಲಿ, ಹೋಟೆಲ್‌ನ ಕ್ಯಾಸಿನೊದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡ ಬೆಂಕಿಯಿಂದ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿಯಿಂದಾಗಿ ಕನಿಷ್ಠ 10 ಜನರು ಸುಟ್ಟು ಕರಕಲಾಗಿದ್ದು, 30 ಜನರು ಗಾಯಗೊಂಡಿದ್ದಾರೆ. ಪೊಯಿಪೆಟ್ ಪಟ್ಟಣದ ಗ್ರ್ಯಾಂಡ್ ಡೈಮಂಡ್ ಸಿಟಿಯ ಕ್ಯಾಸಿನೊ ಹೋಟೆಲ್‌ನಲ್ಲಿ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಸ್ಥಳೀಯ ಕಾಂಬೋಡಿಯಾ ಕಾಲಮಾನದ ಪ್ರಕಾರ ರಾತ್ರಿ 11:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಾಗ ಕ್ಯಾಸಿನೊದಲ್ಲಿ ಸುಮಾರು 400 ಜನರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಜನರು ಜೀವ ಉಳಿಸಿಕೊಳ್ಳಲು ಕಟ್ಟಡದ ಕಿಟಕಿಗಳಿಂದ ಕೆಳಗೆ ಜಿಗಿದಿದ್ದಾರೆ. ಇದರಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಅವರುಗಳು ಕೆಳಗೆ ಬೀಳುವ ದೃಶ್ಯ ನೋಡಿದರೆ ಅಯ್ಯೋ ಪಾಪ ಎನಿಸುವಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ