ಚಿಕ್ಕ ಕಟ್ಟಡ ಇರುವ ಜಾಗಕ್ಕೆ ಶಾಲೆ ಶಿಫ್ಟ್ ವಿಚಾರವಾಗಿ ಪೋಷಕರ ಆಕ್ರೋಶ

ಬುಧವಾರ, 7 ಡಿಸೆಂಬರ್ 2022 (16:55 IST)
ಪೋಷಕರ ಕೂಗು, ಆಕ್ರೋಶ ಮುಗಿಲೆತ್ತರಕೇರಿತು. ನಮಗೆ ನ್ಯಾಯ ಕೊಡಿಸಿ ಎಂಬ ಕೂಗು ಜೋರಾಗಿ ಇತ್ತು. ಯಾರು ಎಸ್ಟೇ ಹೇಳಿದರು ಸಹ ಸಮಾಧಾನ ಆಗದ ಪೋಷಕರು. ತಮ್ಮ ಮಕ್ಕಳಿಗೆ ಆಗುತ್ತಿರುರುವ ಅನ್ಯಾಯ ನೋಡಿ ಪ್ರಶ್ನೆಗಳ ಸುರಿಮಳೆ ಹಾಕುತಿದ್ರು. ಇದೆಲ್ಲ ಬಿಟಿಎಂ ಲೇಔಟ್ ನ ಆರ್ಕಿಡ್ಸ್ ಶಾಲೆ ಆವರಣದಲ್ಲಿ ಕಂಡುಬಂದಿತ್ತು.. ಅಬ್ಬಾ ಎಸ್ಟು ದೊಡ್ಡು ಸ್ಕೂಲ್ ಇಲ್ಲಿ ನಮ್ಮ ಮಕ್ಕಳನ್ನು ಸೇರಿಸಿದರೆ ಚೆನ್ನಾಗಿ ಓದುತ್ತಾರೆ. ಅಷ್ಟೇ ಅಲ್ಲ ಇಲ್ಲಿ ಮಕ್ಕಳಿಗೆ ಬೇಕಾದ ಸೌಕರ್ಯಗಳು ಚೆನ್ನಾಗಿ ಇದೆ ಅಂತ ತಮ್ಮ ಮಕ್ಕಳನ್ನು ಆರ್ಕಿಡ್ಸ್ ಶಾಲೆಗೆ ಸೇರಿಸಿದ ಪೋಷಕರಿಗೆ ಇದೀಗ ಟೆನ್ಶನ್ ಹೆಚ್ಚಾಗುತ್ತಿದೆ.ಈಗ ಹಣದ ಆಸೆಯಿಂದ ಇದೆ ಶಾಲಾ ಆಡಳಿತ ಮಂಡಳಿ ಇಕ್ಕಟಿರುವ ಜಾಗಕ್ಕೆ ನರ್ಸರಿ ಎಲ್.ಕೆ.ಜಿ ಯು.ಕೆ.ಜಿ ಮಕ್ಕಳನ ಬಿಳೆಕಳ್ಳಿ ಕಟ್ಟಡಕ್ಕೆ ಪೋಷಕರ ಅನುಮತಿ ಇಲ್ಲದೆ ಶಿಫ್ಟ್ ಮಾಡಲು ಮುಂದಾಗಿದ್ರು
ಕೆಲವು ದಿನಗಳಿಂದ ನಡೆಯುತ್ತಿರುವ ಆರ್ಕಿಡ್ಸ್  ಸ್ಕೂಲ್ ಗಲಾಟೆ ಇನ್ನೂ ಮುಗಿದಿಲ್ಲ. ಇಂದೂ ಮತ್ತೆ ಪೋಷಕರು  ಹಾಗೂ  ಆರ್ಕಿಡ್ಸ್ ಸ್ಕೂಲ್ ಮಾತಿನ ಜಟಾಪಟಿ ಮುಂದುವರೆದಿದೆ . ಬಿಟಿಎಂ  ಲೇಔಟ್ ಎರಡನೇ ಹಂತದಲ್ಲಿ ಇರುವ  ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಕೆಜಿ ಯುಕೆಜಿ ಮಕ್ಕಳಿಗೆ ಮಾತ್ರ ಕ್ಯಾಂಪಸ್ ಶಿಫ್ಟ್ ಮಾಡಲು ನಿರ್ಧಾರ ಮಾಡಿದೆ.  ಇನ್ನೂ ಆ ಚಿಕ್ಕ ಕಟ್ಟಡ ಇರುವ ಜಾಗಕ್ಕೆ ಶಾಲೆ ಶಿಫ್ಟ್ ವಿಚಾರವಾಗಿ  ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ನ ಈ ನಡೆಗೆ ಪೋಷಕರು  ತೀರ್ವ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಾವು ಫಿಸ್ ಕಟ್ಟಿದ್ದಿವಿ ನಮ್ಮ ಮಕ್ಕಳಿಗೆ ಯಾಕೆ ಹೀಗೆ ಶಿಕ್ಷಣದಿಂದ ವಂಚಿತರಾಗಿ ಮಾಡ್ತಿದ್ದಿರಾ ಶಾಲೆಯ ಮೂಲಭೂತ ಸೌಕರ್ಯಗಳ ನೋಡಿ ನಮ್ಮ ಮಕ್ಕಳ ಅಡ್ಮಿಷನ್ ಮಾಡಿದ್ದೆವೆ ಈಗ ಇಕ್ಕಟಿರುವ ಜಾಗಕ್ಕೆ ನರ್ಸರಿ ಎಲ್ ಕೆಜಿ ಯುಕೆಜಿ ಮಕ್ಕಳನ ಬಿಳೆಕಳ್ಳಿ ಕಟ್ಟಡಕ್ಕೆ ಶಿಫ್ಟ್ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

 ಈ ಕುರಿತು ಮಾತಾನಾಡಿದ ಸೌತ್ ಬಿಇಒ ಪಂಕಜ.ಜಿ.ಸಿ.  ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಪೋಷಕರು ಮಕ್ಕಳನ್ನ ಸ್ಕೂಲ್ ಗೆ ಸೇರಿಸುವಾಗ ಯಾವ ಬಿಲ್ಡಿಂಗ್ ಇರೋತ್ತೋ ಅದೇ ಬಿಲ್ಡಿಂಗ್ ಅಥವಾ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮುಂದುವರೆಸಯಬೇಕು ಅದನ್ನ ಬಿಟ್ಟು ಮಕ್ಕಳನ್ನ ಬೇರೆ ಬಿಲ್ಡಿಂಗ್ ಗೆ ಪೋಷಕರ ಅನುಮತಿ ಇಲ್ಲದೆ ಕಳಿಸುವ ಆಗಿಲ್ಲ ಆದ್ರೆ ಆರ್ಕೀಡ್ಸ್ ಸ್ಕೂಲ್ ಮಕ್ಕಳನ್ನ ಬೇರೆ ಕಡೆ ಶಿಫ್ಟ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ ಹಿನ್ನಲೆ ನಾನು ಕೂಡ ಸ್ಕೂಲ್ ಗೆ ಭೇಟಿ ಕೊಟ್ಟಿದ್ದೇನೆ ಇಲ್ಲಿ ಮ್ಯಾನೇಜ್ಮೆಂಟ್ ನ ಯಾವ ಸದಸ್ಯರು ಇಲ್ಲ ಸದ್ಯ ನಾನು ನೋಟೀಸ್ ಜಾರಿ ಮಾಡಿದ್ದೇನೆ  ಆ ನೋಟೀಸ್ ಗೆ ಸ್ಕೂಲ್ ನ ಮ್ಯಾನೇಜ್ಮೆಂಟ್ ಮೂರು ದಿನಗಳಲ್ಲಿ ಉತ್ತರ ನೀಡಬೇಕು ಎಂದ್ರು 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ