ಬಿಯರ್ ಬಾಟಲ್ ಒಳಗೆ ತಲೆ ಹಾಕಿದ ನಾಗರಹಾವು
 
ನಾಗರ ಹಾವೊಂದು ಬಿಯರ್ ಬಾಟಲ್ ನಲ್ಲಿ ತಲೆ ಸಿಲುಕಿಸಿಕೊಂಡು ಪರದಾಡಿದ ಘಟನೆ ನಡೆದಿದೆ.
									
				ಬಿಯರ್ ಬಾಟಲ್ ನಲ್ಲಿ ತಲೆ ಸಿಕ್ಕಿಸಿಕೊಂಡು ಪರದಾಡಿದೆ ನಾಗರಹಾವೊಂದು. ಹಾವಿನ ಈ ವಿಡಿಯೋ ವೈರಲ್ ಆಗಿದೆ.
 ಚಿತ್ರದುರ್ಗದ ಹೊಸದುರ್ಗ ತಾಲೂಕಿನ ದೇವಪುರ ಬಳಿ ಈ ಘಟನೆ ನಡೆದಿದೆ. ಬಿಯರ್ ಬಾಟಲ್ ನಲ್ಲಿ ನಾಗರ ಹಾವು ಸಿಲುಕಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
									
				ನಾಗರಹಾವಿನ ನರಳಾಟದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಟಲ್ ನಲ್ಲಿ ತೂರಿದ ಹಾವನ್ನು ನೋಡಲು ಜಮಾಯಿಸಿದ್ದ ಜನರು  ಬಾಟಲ್ ನಿಂದ ಹಾವನ್ನು ಬಿಡಿಸಲು ಯತ್ನಿಸಿ ವಿಫಲರಾಗಿದ್ದಾರೆ.