ಕವಿತಾ ಮತ್ತು ಮಂಜುನಾಥ್ ಹೆತ್ತ ಮಗುವನ್ನು ಮಾರಾಟಮಾಡಲು ಮುಂದಾದ ಪಾಪಿಗಳು. ಈ ದಂಪತಿಗೆ ಈಗಾಗಲೇ ಮೂರು ಹೆಣ್ಣಮಕ್ಕಳಿದ್ದು, ನಾಲ್ಕನೇ ಮಗು ಕೂಡ ಹೆಣ್ಣಾದ ಕಾರಣ ಆ ಮಗುವನ್ನು ಮಕ್ಕಳಿಲ್ಲದ ದಂಪತಿಗೆ 25 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ.
ಈ ವಿಚಾರ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿದ ಕಾರಣ ಅವರು ದಂಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಸತ್ಯಾಂಶ ತಿಳಿದು ಇದೀಗ ಮಗುವಿನ ತಂದೆತಾಯಿ ಸೇರಿ ಒಟ್ಟು ಈ ಕೆಲಸದಲ್ಲಿ ಶಾಮೀಲಾದ 7 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.