ತನ್ನ ಪತ್ನಿಯ ಮೇಲಿನ ಕೋಪದಿಂದಾಗಿ ಮೂರು ತಿಂಗಳ ಮಗುವನ್ನು ತಂದೆಯೇ ಕೊಲೆ ಮಾಡಿದ್ದಾನೆ.
ಆನೇಕಲ್ ವ್ಯಾಪ್ತಿಯ ಯಡವನಹಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಆರೋಪಿ ತಂದೆ ಶ್ರೀನಿವಾಸ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪತ್ನಿ ಜನನಿ ಜೊತೆಗೆ ಪತಿ ಶ್ರೀನಿವಾಸ್ ಜಗಳವಾಡುತ್ತಿರುವಾಗ ಮಗಳು ಅತ್ತಿದ್ದಾಳೆ. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಪತಿ ಶ್ರೀನಿವಾಸ್ ತನ್ನ ಮಗಳನ್ನು ಎತ್ತಿ ಬಿಸಾಕಿದ್ದಾನೆ.
ತಾಯಿ ತನ್ನ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಅತ್ತಿಬೆಲೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.