ದೊಡ್ಡಬಳ್ಳಾಫುರ ಮೂಲದ ಯುವಕ ನಂದಾ ಎಂಬಾತ ಚಿಕ್ಕಬಳ್ಳಾಫುರ ತಾಲೂಕಿನ ಹಾರೋಬಂಡೆ ಗ್ರಾಮದ ದರ್ಶನ್ ಎಂಬ ಯುವಕನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ತೆಗೆದಿದ್ದನು. ಈ ಸಂಬಂಧ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಇದೀಗ ಹಾರೋಬಂಡೆ ಗ್ರಾಮದ ಬಳಿ ನಂದಾ ಹೆಣವಾಗಿ ಬಿದ್ದಿದ್ದು, ವಿಡಿಯೋ, ಫೋಟೋ ವಿಚಾರಕ್ಕೆ ದ್ವೇಷದಿಂದ ದರ್ಶನ್ ಮತ್ತು ಆತನ ಸ್ನೇಹಿತ ಆಶ್ರಯ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಇನ್ನೂ ವಿಷಯ ತಿಳಿದ ಕುಟುಂಭಸ್ಥರಿಗೆ ಶಾಕ್ ಆಗಿದ್ದು ,ಜಗಳ ಮಾಡಿಕೊಳ್ಳುವುದು ಬಿಟ್ಟು ನಮ್ಮ ಗಮನಕ್ಕೆ ತಂದಿದ್ದರೆ ನಮ್ಮ ಮಗನನ್ನು ನಾವು ಭದ್ರಪಡಿಸಿಕೊಳ್ಳುತ್ತಿದ್ವಿ ,ಇದ್ದ ಒಬ್ಬ ಮಗನನ್ನು ಕೊಲೆ ಮಾಡಿ ನಮ್ಮನ್ನ ಅನಾಥ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ .
ನನ್ನ ತಮ್ಮ ನಂದಾ ಮುನ್ಸಿಪಲ್ ಕಾಲೇಜಿನಲ್ಲಿ ಸೆಕೆಂಡ್ ಇಯರ್ ಡಿಗ್ರಿ ಒದುತಿದ್ದ ನಮ್ಮ ತಾಯಿ ಒಬ್ಬಳ ದುಡಿಮೆ ಸಾಲಲ್ಲ ಅಂತ ಗಾರ್ಮೆಂಟ್ಸ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಮಾಡ್ತಿದ್ದ , ಎಲ್ಲರೊಂದಿಗೆ ಲವಲವಿಕೆಯಿಂದ ಇದ್ದ ಪ್ರತಿದಿನ ಕಾಲ್ ಮಾಡಿ ಕಾಮಿಡಿ ಮಾಡ್ತಿದ್ದ , ನಮ್ಮ ತಾಯಿ ಇತ್ತೀಚೆಗಷ್ಟೇ ಹೊಸ ಬೈಕ್ ಕೊಡಿಸಿದ್ರು ,ದರ್ಶನ್ ತಂಗೀನೆ ಹಲವು ಬಾರಿ ನಮ್ಮ ಮನೆ ಕಡೆ ನೋಡಿಕೊಂಡು ಹೋಗ್ತಿದ್ಲು , ಅವರ ಸಹವಾಸ ಬೇಡ ಎಂದು ಬುದ್ದಿ ಹೇಳಿದ್ವಿ ,ಇದೇ ವಿಚಾರಕ್ಕೆ ಜಗಳ ಆಗಿರುವ ಬಗ್ಗೆ ನಡೆದಿತ್ತು, ಆದರೆ ನಮಗೆ ಗೊತ್ತಾಗಿರಲಿಲ್ಲ, ಈ ಬಗ್ಗೆ ದರ್ಶನ್ ಮತ್ತು ಆತನ ಸ್ನೇಹಿತರನ್ನು ಯಾಕೆ ಜಗಳ ಮಾಡಿಕೊಂಡ್ರಿ ಅಂತ ಕೇಳಿದ್ರೆ ನಿಮಗೆ ಮುಂದೆ ಗೊತ್ತಾಗುತ್ತೆ ಅಂತ ಹೇಳಿದ್ರು ಈ ರೀತಿ ಮಾಡ್ತಾರೆ ಅಂತ ಗೊತ್ತಾಗಲಿಲ್ಲ ಅಂತ ಮೃತನ ಸಹೋದರಿ ಚೈತ್ರ ಹೇಳಿದ್ದಾಳೆ .