ಬೋನಸ್ ನೀಡಿಲ್ಲ ; ಗ್ರಾಮ ಪಂಚಾಯ್ತಿ ಕಚೇರಿಗೆ ಚಪ್ಪಲಿ ಹಾರ

ಮಂಗಳವಾರ, 4 ಅಕ್ಟೋಬರ್ 2022 (16:19 IST)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಆವತಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕುವ ಮೂಲಕ ಆಕ್ರೋಶವನ್ನು ಹೊರಹಾಕಿರುವ ಸ್ವಚ್ಛತಾ ಕೆಲಸಗಾರ ಕೃಷ್ಣಪ್ಪ ವಿರುದ್ಧ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಪಂಚಾಯತ್‍ಗೆ ಭೇಟಿ ನೀಡಿದ ದೇವನಹಳ್ಳಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಸ್ವಚ್ಛತಾಗಾರರ ಸಭೆ ಕರೆದು ಪರಿಶೀಲನೆ ನಡೆಸಿದರು.

ಈ ವೇಳೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪಿಡಿಒ ಶಿವರಾಜ್ ಆವತಿ ಗ್ರಾಮ ಪಂಚಾಯತ್‍ಗೆ ಬಂದಾಗಿನಿಂದ ಪಂಚಾಯತ್‍ನಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಚುನಾಯಿತ ಸದಸ್ಯರ ಗಮನಕ್ಕೆ ಬಾರದೆ ಸಭೆಗಳನ್ನು ಕರೆದು ಚುನಾಯಿತ ಸದಸ್ಯರಿಗೆ ಗೊಂದಲ ಸೃಷ್ಟಿಸುವಂತಹ ಕೆಲಸಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ