ಅಗ್ನಿ ಅವಘಡ; ಹತ್ತಿ ಸಂಪೂರ್ಣ ಭಸ್ಮ

ಮಂಗಳವಾರ, 13 ಜೂನ್ 2023 (14:00 IST)
ಆಕಸ್ಮಿಕ ಅಗ್ನಿ ಅವಘಡಕ್ಕೆ ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಯಲಗೋಡ ಗ್ರಾಮದಲ್ಲಿ ನಡೆದಿದೆ.. ಕಣಮೇಶ್ವರ ಎಂಬುವವರಿಗೆ ಸೇರಿದ ತೋಟದ ಮನೆಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಬೆಲೆ ಬಾಳುವ ಹತ್ತಿ ಸುಟ್ಟು ಭಸ್ಮವಾಗಿದೆ.. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಸುಮಾರು 150 ಕ್ಕೂ ಹೆಚ್ಚು ಹತ್ತಿ ಚೀಲಗಳು ಸುಟ್ಟು ಭಸ್ಮವಾಗಿದೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ