ಬೆಂಕಿ ಅವಘಡ- ಕೋಟ್ಯಂತರ ಮೌಲ್ಯದ ಹತ್ತಿ ಭಸ್ಮ!
ರಾಜೇಶ್ ಕಾಟನ್ ಜಿನ್ನಿಂಗ್ ಮತ್ತು ಪ್ರೇಸಿಂಗ್ ಮಿಲ್ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಕೋಟ್ಯಂತರ ರೂ. ಮೌಲ್ಯದ ಹತ್ತಿ ಜೊತೆ ಹತ್ತಿ ಕಾಳು ಹಾಗೂ ಹಿಂಡಿ ಕೂಡಾ ಬೆಂಕಿಗೆ ಆಹುತಿಯಾಗಿದೆ.
ಸ್ಥಳಕ್ಕೆ ಧಾರವಾಡ ಹಾಗೂ ಬೇಲೂರು ಸೇರಿದಂತೆ ಒಟ್ಟು ಮೂರು ಅಗ್ನಿಶಾಮಕ ಭೇಟಿ ನೀಡಿದ್ದು, ಬೆಂಕಿ ನಂದಿಸಲು ಪ್ರಯತ್ನ ನಡೆಸಿವೆ. ಗೋಡಾನ್ನಲ್ಲಿ ಹತ್ತಿಗಳನ್ನು ಇಡಲಾಗಿತ್ತು. ಆದರೆ ಈ ವೇಳೆ ಏಕಾಎಕಿ ಬೆಂಕಿ ಕಾಣಿಸಿಕೊಂಡಿದೆ.