ಪೂಜಾ ಸಾಮಾಗ್ರಿ ಗೋಡೌನ್ ಗೆ ಬೆಂಕಿ
ಸತೀಶ್ ಸ್ಟೋರ್ ಎಂಬಾ ಗೋಡೌನ್ ಗೆ ಬೆಂಕಿ ಬಿದ್ದಿದ್ದು,ಪೂಜಾ ಸಾಮಾಗ್ರಿಗಳನ್ನು ಇಟ್ಟಿದಂತಹ ಗೋಡೌನ್ ಹೊತ್ತಿಉರಿದಿದೆ. ರಾತ್ರಿ 11:30 ರ ಸುಮಾರಿಗೆ ಅವಘಡ ನಡೆದಿದೆ.ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಗೋಡೌನ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಗೋಡೌನ್ ಒಳಭಾಗದಲ್ಲಿದ್ದ ಕರ್ಪುರ, ಊದಿನ ಕಡ್ಡಿ , ದೀಪದ ಎಣ್ಣೆ ಮತ್ತು ಇತರೆ ಪೂಜಾ ಸಾಮಾಗ್ರಿಗಳು ಬೆಂಕಿಯಿಂದ ಭಸ್ಮವಾಗಿದೆ.ಪೂಜಾ ಸಾಮಾಗ್ರಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದ ಹಿನ್ನಲೆ ಬೆಂಕಿ ನಂದಿಸಲು ಹರಸಾಹಸಪಡಲಾಗಿದ್ದು,ಮೂರು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.