ಪದೇ ಪದೇ ಡೆಡ್ ಲೈನ್ ನೀಡಿದ್ರೂ ಕುಂಟುತ್ತಿರೋ ಏರ್ ಪೋರ್ಟ್

ಮಂಗಳವಾರ, 1 ಅಕ್ಟೋಬರ್ 2019 (17:08 IST)
ಈ ಹಿಂದಿನ ಸರಕಾರದಲ್ಲಿ ಶಾಸಕರು, ಸಚಿವರು, ಸಂಸದರೂ ಡೆಡ್ ಲೈನ್ ನೀಡಿದ್ದರು. ಈಗಿನ ಸಂಸದರೂ ಡೆಡ್ ಲೈನ್ ನೀಡ್ತಿದ್ದಾರೆ. ಆದರೆ ಏರ್ ಪೋರ್ಟ್ ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಲೇ ಇಲ್ಲ.

ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಕಲಬುರಗಿ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಪ್ರಧಾನ ಮಂತ್ರಿಯವರನ್ನು ಆಹ್ವಾನಿಸುವ ಉದ್ದೇಶ ಹೊಂದಿದ್ದೇವೆ. ಶೀಘ್ರವೇ ವಿಮಾನ ನಿಲ್ದಾಣದ ಎಲ್ಲ ಮೂಲಭೂತ ಸೌಕರ್ಯಗಳು ಹಾಗೂ ಪ್ರಗತಿಯಲ್ಲಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಬೇಕು. ಹೀಗಂತ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ  ಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಲಬುರಗಿ ವಿಮಾನ ನಿಲ್ದಾಣದ ಕುರಿತಂತೆ ಭೂಸ್ವಾಧೀನ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟ ದೆಹಲಿ ಹಂತದಲ್ಲಿ ವಿಳಂಬವಿರುವ ಅಲ್ಲಿನ ಕೆಲಸಗಳು ನಾನು ಫಾಲೋಅಪ್ ಮಾಡುತ್ತೇನೆ.

ವಿಮಾನ ನಿಲ್ದಾಣದ ಸುತ್ತಮುತ್ತ ನಿರ್ಮಿಸಿದ ಕಂಪೌಂಡ ಗೋಡೆಯನ್ನು ಪರಿಶೀಲಿಸಿ ಕಂಪೌಂಡ ಗೋಡೆಗಳು ದುರಸ್ತಿ ಹಂತದಲ್ಲಿ ಇದ್ದರೆ ದುರಸ್ತಿಗೊಳಿಸಿ ಯಾವುದೇ ಪ್ರಾಣಿಗಳು ಒಳಗಡೆ ಪ್ರವೇಶಿಸದಂತೆ ಕ್ರಮವಹಿಸಬೇಕೆಂದರು.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ವಿಮಾನ ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದು, ಅಕ್ಟೋಬರ್ 15 ರೊಳಗಾಗಿ ವಿಮಾನ ನಿಲ್ದಾಣದ ಬಾಕಿ ಉಳಿದಿರುವ ಫುಟ್ಟಪಾತ್, ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಸೇಡಂ ರಸ್ತೆಯಿಂದ ವಿಮಾನ ನಿಲ್ದಾಣವರೆಗೆ ಬೀದಿ ದೀಪಗಳ ಅಳವಡಿಸುವ ಕೆಲಸಗಳು ಪೂರ್ಣಗೊಳಿಸಬೇಕೆಂದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ