ತಂಗಿಯನ್ನ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನ ಕೊಲೆ

ಶನಿವಾರ, 23 ಡಿಸೆಂಬರ್ 2023 (21:16 IST)
ತನ್ನ ತಂಗಿಯನ್ನ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಪರಮಾಪ್ತ ಸ್ನೇಹಿತನನ್ನೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಶೆಟ್ಟಿ ಕಾಲೇಜು ಬಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.
 
ಪಾರ್ಟಿ ಮಾಡೋಣ ಬಾ ಎಂದು ಕರೆದುಕೊಂಡು ಹೋಗಿ ಕುಡಿಸಿ ಮೂವರು ಆರೋಪಿಗಳು ಯುವಕನನ್ನ ಕೊಲೆಗೈದಿದ್ದಾರೆ.. ಕಲಬುರಗಿಯ ಬಾಪುನಗರ ನಿವಾಸಿ ಕಾರ್ತಿಕ್ ಉಪಾಧ್ಯ ಮೃತ ದುರ್ದೈವಿಯಾಗಿದ್ದು, ಅಲಿ, ಕನ್ಹಯ್ಯ, ರೋಹಿತ್ ಸೇರಿದಂತೆ ಮೂವರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿಯ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ