ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬರ್ತಿದ್ದ ಗ್ಯಾಂಗ್ ಮಾಡ್ತಿತ್ತು ಖತರ್ನಾಕ್ ಕೆಲಸ

ಶನಿವಾರ, 17 ಆಗಸ್ಟ್ 2019 (17:04 IST)
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ಹಣವಂತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕುಖ್ಯಾತ ದರೋಡೆಕೋರರ ಗ್ಯಾಂಗ್ ಕಥೆ ಈಗ ಹೀಗಾಗಿದೆ.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಮಾಡಲಾಗಿತ್ತು. 
ರಾತ್ರಿ ಬಂಧಿತರಾದ ಎಂಟು ಮಂದಿ ಅನುಮಾನಾಸ್ಪದ ವ್ಯಕ್ತಿಗಳು ದರೋಡೆಗೆ ಸಂಚು ರೂಪಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.

ಮಂಗಳೂರಿನ ಪಂಪ್‌ವೆಲ್ ಬಳಿ ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳು ಇರುವ ಬಗ್ಗೆ ಮಾಹಿತಿ ತಿಳಿಯಿತು. ಕೂಡಲೇ ನಾವು ಅಲ್ಲಿಗೆ ಹೋದಾಗ ಒಂದು ತಂಡ ಕಾರಿನಲ್ಲಿ ಭಾರತ ಸರಕಾರದ ನಕಲಿ ಫಲಕ ಅಳವಡಿಸಿದ್ದರು. ನಮ್ಮನ್ನು ನೋಡಿ ಪರಾರಿಯಾಗಲು ಪ್ರಯತ್ನ ಪಟ್ಟರು. ಕೂಡಲೇ ನಾವು ಅವ್ರನ್ನು ಬಂಧಿಸಿದೆವು ಎಂದರು.

ಇನ್ನು ಈ ಲಾಡ್ಜ್ ನಲ್ಲಿದ್ದ ಗ್ಯಾಂಗ್ ನಲ್ಲಿ ಒಟ್ಟು 8 ಮಂದಿ ಇದ್ದರು. ಇವ್ರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದೇವೆ. ಸ್ಯಾಮ್ ಪೀಟರ್ ಎಂಬಾತ ಈ ತಂಡದ ಮುಖಂಡ. ಈತ ಮೂಲತಃ ಕೇರಳದವ. ಈತನ ತಾಂತ್ರಿಕ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದರು.

ಸರಕಾರಿ ಗನ್ ಮ್ಯಾನ್ ತರ ಫೋಸ್ ಕೊಡುವವರು ಇವನಿಗೆ ಗನ್ ಮ್ಯಾನ್‌ ಗಳಾಗಿದ್ದರು. ಅವ್ರನ್ನು ಕೂಡಾ ವಶಕ್ಕೆ ಪಡೆದುಕೊಂಡಿದ್ದೇವೆ. ಮಂಗಳೂರಿನ ನಿವಾಸಿಗಳಾದ ಲತೀಫ್ ಹಾಗೂ ಚೆರಿಯರ್ ಎಂಬುವವರು ಈತನಿಗೆ ಸಹಾಯ ಮಾಡುತ್ತಿದ್ದರು. ಇವ್ರನ್ನು ಕೂಡಾ ಬಂಧಿಸಿದ್ದೇವೆ ಅಂದ್ರು. ಇವ್ರದ್ದು ಒಂದು ದರೋಡೆ ಗ್ಯಾಂಗ್. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಇವ್ರು ಮಂಗಳೂರಿನಲ್ಲಿ ಹಣವಂತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದ್ರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ