ದೈತ್ಯ ಮರಳು ಚಂಡಮಾರುತ

ಸೋಮವಾರ, 25 ಜುಲೈ 2022 (19:57 IST)
ಚೀನಾದ ವಾಯವ್ಯ ಪ್ರದೇಶದಲ್ಲಿ ದೈತ್ಯ ಮರಳು ಚಂಡಮಾರುತ ಬೀಸಿದ ಘಟನೆ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರುಗುಗೊಳಿಸಿದೆ. ರಸ್ತೆ ಹಾದು ಹೋಗಿರುವ ಮರುಭೂಮಿಯಲ್ಲಿ ಆಗಸದೆತ್ತರಕ್ಕೆ ಮರಳು ಹಾರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಕ್ಯುವೆದರ್ ಪ್ರಕಾರ, ವಾಯುವ್ಯ ಚೀನಾದಲ್ಲಿರುವ ಕಿಂಗ್ಹೈ ಪ್ರಾಂತ್ಯದ ಭಾಗಗಳಲ್ಲಿ ಪ್ರಬಲವಾದ ಧೂಳಿನ ಚಂಡಮಾರುತ  ಸುಮಾರು 4 ಗಂಟೆಗಳ ಕಾಲ ಮರಳು ಬಿರುಗಾಳಿ ಬೀಸಿದೆ..ಈ ವೇಳೆ ಮರುಭೂಮಿಯ ರಸ್ತೆ ಮೂಲಕ ಸಂಚರಿಸುತ್ತಿದ್ದ ವಾಹನ ಸವಾರರು ದ್ಯತ್ಯ ಧೂಳಿನ ಚಂಡಮಾರುತ ನೋಡಿ ಬೆಚ್ಚಿಬಿದ್ದಿದ್ದಾರೆ..ಬೃಹತ್ ಚಂಡಮಾರುತವು ಕ್ವಿಂಗ್ಹೈ ಪ್ರಾಂತ್ಯದ ಕೆಲವು ಪಟ್ಟಣಗಳಲ್ಲಿ ಗೋಚರಿಸಿದೆ ಮತ್ತು 200 ಮೀಟರ್‌ಗಿಂತ ಕಡಿಮೆಯಾಗಿ ಸೂರ್ಯನೂ ಕಾಣದಂತೆ ಧೂಳು ಆವರಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ