ಹೊಸ ವರ್ಷಕ್ಕೆ ಬೆರಳೆಣಿಕೆ ದಿನಗಳು ಬಾಕಿ - ಅಗತ್ಯ ಬಂದೊಬಸ್ತ್ ನೊಂದಿಗೆ ಸಜ್ಜಾದ ಪೊಲೀಸರು

ಬುಧವಾರ, 28 ಡಿಸೆಂಬರ್ 2022 (13:44 IST)
ಹೊಸ ವರ್ಷಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇದೆ.ಹೀಗಾಗಿ  ಪೊಲೀಸರಿಂದ ಅಗತ್ಯ ಬಂದೊಬಸ್ತ್  ವ್ಯವಸ್ಥೆ ನಡೆಯುತ್ತಿದೆ.ಬ್ರಿಗೇಡ್ 
ಎಂಜಿ ರಸ್ತೆ ಗೆ ವಿಸಿಟ್ ಮಾಡಿದ ಕಮೀಷನರ್ , ಹೆಚ್ಚು ವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ,ಸೆಂಟ್ರಲ್ ಡಿಸಿಪಿ ಶ್ರೀನಿವಾಸ್ ಗೌಡ,ನ್ಯೂಯಿರ್ ಸೆಲೆಬ್ರೇಷನ್ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
ಬ್ರಿಗೇಡ್ ರೋಡ್ ಭದ್ರತೆ ಪರಿಶೀಲನೆ ಬಳಿಕ ಕಮೀಷನರ್ ಪ್ರತಿಕ್ರಿಯಿಸಿದ್ದು,ಕೋವಿಡ್ ಲಾಕ್ ಡೌನ್ ಬಳಿಕ ಹೋಸ ವರ್ಷದ ಸಂಭ್ರಮಾಚರಣೆ ಆಗ್ತಾ ಇದೆ.ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರ್ತಾ ಇದ್ದಾರೆ.ಯಾವೆಲ್ಲ ಪಾಯಿಂಟ್ ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಬೇಕು ಅನ್ನೋ ಫ್ಲ್ಯಾನ್ ಆಗಿದೆ.ಸಿಸಿ ಕ್ಯಾಮರಾಗಳ ಜೊತೆ ಡ್ರೋನ್ ಗಳನ್ನು ಬಳಕೆ ಮಾಡ್ತೀವಿ.ಮಕ್ಕಳು ಹಾಗೂ ಹೆಣ್ಣು ಮಕ್ಕಳ ಭದ್ರತೆ ತುಂಬಾ ಮುಖ್ಯ.ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇರೋದಿಲ್ಲ.ಪಬ್ ರೆಸ್ಟೋರೆಂಟ್ ಹಾಗೂ ಬಾರ್ ನವರು ಇನ್ನಷ್ಟು ಸಿಸಿ ಕ್ಯಾಮರಾಗಳನ್ನು ಹಾಕಲು ಹೇಳಿದ್ದೀವಿ.ಈಗಾಗಲೇ ಎಲ್ಲಾ ಪಬ್ ಹಾಗೂ ರೆಸ್ಟೋರೆಂಟ್ ಗಳನ್ನು ಪರಿಶೀಲನೆ ಮಾಡಲಾಗಿದೆ.ಆಯಾ ವಿಭಾಗದ ಡಿಸಿಪಿಗಳು ವಿಸಿಟ್ ಮಾಡಿ ಪರಿಶೀಲನೆ ಮಾಡಿದ್ದಾರೆ.ಬ್ರಿಗೇಡ್ ರೋಡಲ್ಲಿ ಅತಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.ಮೆಟಲ್ ಡಿಟೆಕ್ಟರ್ ಗಳನ್ನು ರಸ್ತೆಯ ಎರಡು ಬದಿ ಹಾಕಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ