ಮುಸ್ಲಿಮರು ನಾಗೇನಹಳ್ಳಿಯಲ್ಲಿ ನಮಾಜ್ ಮಾಡಿ : ಮುತಾಲಿಕ್

ಬುಧವಾರ, 28 ಡಿಸೆಂಬರ್ 2022 (07:36 IST)
ಚಿಕ್ಕಮಗಳೂರು : ದತ್ತಪೀಠದ ಗುಹೆಯೊಳಗಡೆ ಸೌಹಾರ್ದಯುತವಾಗಿ ಪಾದುಕೆಯ ಪೂಜೆ, ರುದ್ರಾಭಿಷೇಕವಾಗುತ್ತಿದೆ. ಆರತಿ, ಘಂಟೆ, ಶಂಖನಾದ ಎಲ್ಲವೂ ಇಸ್ಲಾಮಿಗೆ ವಿರುದ್ಧವಾಗಿದೆ.

ಹಾಗಾಗಿ ಇದನ್ನು ಮುಸ್ಲಿಮರು ಬಿಟ್ಟುಕೊಟ್ಟು ನಾಗೇನಹಳ್ಳಿಯಲ್ಲಿ ನಮಾಜ್, ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

ದತ್ತಪೀಠದಲ್ಲಿ ದತ್ತಾತ್ರೇಯರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ಪೂಜೆ, ರುದ್ರಾಭಿಷೇಕ, ಶಂಖನಾದ, ಆರತಿ ಎಲ್ಲವನ್ನೂ ನೋಡಿ-ಕೇಳಿ ಬದುಕು ಧನ್ಯವಾಯಿತು.

30 ವರ್ಷಗಳ ಸುದೀರ್ಘವಾದ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ, ಶಾಸಕ ಸಿ.ಟಿ. ರವಿಯವರಿಗೆ ಧನ್ಯವಾದ. ಕಾನೂನಾತ್ಮಕವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಕೆಲಸವಾಗಬೇಕು ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ