ಬೈ ಎಲೆಕ್ಷನ್ – ಬಿಜೆಪಿಯ ನಾರಾಯಣಗೌಡಗೆ ಹ್ಯಾಟ್ರಿಕ್ ಗೆಲುವು
ರಾಜ್ಯದ ಉಪ ಚುನಾವಣೆಯಲ್ಲಿ ಕಮಲ ಅರಳುವುದು ನಿಶ್ಚಿತ. ನಾರಾಯಣಗೌಡರಿಗೆ ಹ್ಯಾಟ್ರಿಕ್ ಗೆಲುವು ದೊರೆಯಲಿದೆ. ಕೆಆರ್ ಪೇಟೆ ತಾಲ್ಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರದ ಸುಭದ್ರತೆಗೆ ಹಾಗೂ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗೆ ಕ್ಷೇತ್ರದ ಜನತೆ ರಾಜಕೀಯ ಜಾಣ್ಮೆಯನ್ನು ಪ್ರದರ್ಶನ ಮಾಡಿ ಕಮಲವನ್ನು ಅರಳಿಸಬೇಕು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತವರಿನ ಉಡುಗೊರೆಯನ್ನು ನೀಡಬೇಕು ಎಂದರು. ನಾರಾಯಣಗೌಡ
ಜಿಲ್ಲಾ ಮಂತ್ರಿಯಾಗಿ ಕೆಲಸ ಮಾಡಿ ತಾಲ್ಲೂಕಿನ ಋಣವನ್ನು ತೀರಿಸಲಿದ್ದಾರೆ ಎಂದು ವಿಜಯಶಂಕರ್ ಹೇಳಿದರು.